Wednesday 27 March 2013


ಕವಿತೆ

- ಡಾ. ಪ್ರಕಾಶ ಗ. ಖಾಡೆ

ಬರುಬರುತ್ತ ದಿನಮಾನ ಸುಮಾರು ಎಂದರು
ಮಾಪನಕ್ಕೆ ಕುಂತಾಗ ಇಂಥದೇ ಮಾತು, ಮುರುಕು
ಯಾರಿಗೆ ಯಾರೋ ಖೂನ ಹೇಳಾವರು ಉಳಿದಿಲ್ಲ
ದಿಗಿಲಗೊಂಡವರಿಗಂತೂ ನೆಲಾ ಹೂತರೂ ತಿಳಿಯಾಕಿಲ್ಲ
.
ಎಮ್ಮಿ ಹೋತಾ ಕೋಣಾ ಕುರಿ ನಂಬಿಗಿ ಉಳಿದಿಲ್ಲ
ಕಡಿಯಾವರು ಬಡ್ಯಾವರು ಕಡೀಕ ನಿಂತಾರ
ಸುದ್ದ ಇದ್ದ ಮಂದಿ ದಂಗಾಗಿ ಒಳಗ ಕುಂತಾರ
ಹುಚ್ಚಮಲ್ಲಿ ಸಂತ್ಯಾಗ ಕೊಳ್ಳಾಕ ಏನ ಸಿಗತೈತಿ
ಹೀಂಗ ಸಂಜೀತನಾ ಬಿಡದ ಹುಡಕೀ
ಸಿಕ್ಕರ ಪಾಲ ಹಂಚಕೊಳ್ಳಾಕ ಪಾಳಿ ನಿಂತಾರ.
.
ಹೆಣಕ್ಕ ಹೆಗಲ ಕೊಡಾವ್ರು ಮಾನಗೇಡಿ ಆಗ್ಯಾರ
ಹೊತಗೊಂಡ ಆರ್ಯಾಣ ಮುಟ್ಟಿಸಿದರ ಪಾಡೈತಿ
ಅರಳಿದ ಹೂವಾ ಹಸಿ ಹುಲ್ಲಾ ಮಿನುಕು ಹುಳಾ
ನಡದವರು ತುಳದ ತುಳಿದು ಮಣ್ಣಮಾಡ್ಯಾರ
.
ಉರಿಯೋ ದೀಪ ಆರಿಸಾಕ ಗಾಳಿನ ಬೇಕಾಗಿಲ್ಲ
ಬೆಳ್ಳ ಮುಖದವರು ಬಣ್ಣಾ ಬಡಕೊಂಡ ಕರ್ರಗಾಗ್ಯಾರ
ಮ್ಯಾಲ ನೋಡಾಕ ಚೆಂದ ಒಳಗೆಲ್ಲಾ ಬಡಿವಾರ
ಮಾತಿಗೆ ಮಾತ ಬೆಳೆಸಿದರ ಬಿಸಿಲ ಜಾಸ್ತಿ; ಮೌನಾನ ಆಸ್ತಿ
.
ಕಡೀಗಿ ಒಂದ ಮಾತ ಉಳೀತು
ಪಡಕೊಂಡವರ ಋಣಕ್ಕ ಈಗೇನು ಹೇಳಲಾಗದು


7 Comments

  • ಬಸೂ says:
    ಇಷ್ಟವಾಯ್ತು
  • Gopaal Wajapeyi says:
    ಆಹಾ…
    ‘ಅವರೆಲ್ಲಾರೂ ಸಿಕ್ಕರ ಪಾಲು ಹಂಚಿಕೊಳ್ಳಾ ಪಾಳಿ ನಿಂತಾರ…’
    ‘ಮಾತಿಗೆ ಮಾತ ಬೆಳೆಸಿದರ ಬಿಸಿಲ ಜಾಸ್ತಿ ; ಮೌನಾನ ಆಸ್ತಿ…’
    ಹೌದು.
    ಈ ನಿಮ್ಮ ‘ಕಡೀಕ ಒಂದ ಮಾತು’ ಕಡಿತನಕಾ ನೆಪ್ಪಿಡೂವಂಗೈತಿ…
  • mmshaik says:
    njce..
  • ಪಡಕೊಂಡವರ ಋಣದ ಬಗ್ಗೆ ಪಡಕೊಂಡವರೇ ಹೇಳಬೇಕು… ಚೆನ್ನಾಗಿದೆ ಕವಿತೆ ಅಣ್ಣಯ್ಯ… :)
  • ಹನುಮಂತ ಹಾಲಿಗೇರಿ says:
    ಚಲೋ ಬರಿದಿರಿ, ಮಸ್ತ ಹಿಡಿಸಿತು.
  • vithal dalawai says:
    kavana channagide
  • ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ. says:
    ಕವಿತೆ ಮೆಚ್ಚಿಕೊಂಡ ತಮಗೆಲ್ಲ ಧನ್ಯವಾದಗಳು.

No comments:

Post a Comment