Monday 28 April 2014

ಡಾ.ಶಿವಾನಂದ ಕುಬಸದ ಅವರ "ಫೇಸ್ಬುಕ್ಕ ಪುರಾಣ'

ಫೇಸ್ ಬುಕ್ ಚರಿತೆ...!!
=================
ಡಾ.ಶಿವಾನಂದ ಕುಬಸದ










ಮೊದಲ ದಿನ ಮುತುವರ್ಜಿ
ಫೇಸ್ ಬುಕ್ ನೆಲ್ಲ ಸುತ್ತು ಹೊಡೆದು
ಹುಡುಕಿ ಹೆಕ್ಕಿ ತೆಗೆದು ಎಲ್ಲರಿಗೂ 
ಜಡಿದು ಬಿಡುತ್ತಾರೆ ಫ್ರೆಂಡ್ ರಿಕ್ವೆಸ್ಟ್..
ಅಲ್ಲಿಯ ಇಲ್ಲಿಯ ಗೊತ್ತಿರುವ ಗೊತ್ತಿರದ
ಎಂಥೆಂಥವರಿಗೋ ಹೊರಡುತ್ತವೆ ಜಗವ ಸುತ್ತಿ
ಮೈಲಾರ ಮುತ್ತಿ ಮತ್ತೆ ತಿರುಗಿ ಬಂದು ಬಿದ್ದು
ಸಂಭ್ರಮಕೆ ಕಾರಣವಾಗುವ
“accepted your friend request” ಗಳು...
ಇವನಿಗೋ ಜಗವ ಗೆದ್ದಷ್ಟು ಖುಷಿ
ಇಂಥವರೆಲ್ಲ ನನ್ನ ಫ್ರೆಂಡ್ ಆದರಲ್ಲ ಎಂದು
ಶುರುವಾಯಿತು ನೋಡಿ ಮೆಸೇಜ್ ಗಳ ಕುಟ್ಟುವುದು
ಸುಖಾಸುಮ್ಮನೆ ‘ಊಟ ಆಯ್ತಾ, ನಿದ್ದೆ ಆಯ್ತಾ’
ಎನ್ನುವ ಕಿರಿಕ್ಕು ಮತ್ತೆ ನೋಡಿದ್ದನ್ನು ಉಣ್ಣುವುದನ್ನು
ಹಾದಿ ಬೀದಿಯಲ್ಲಿ ಬಿದ್ದಿದ್ದನ್ನು ಕ್ಲಿಕ್ಕಿಸಿ ಅಪ್ ಲೋಡಿಸಿ
ಏನೇನೋ ಬರೆದು ಕವಿತೆ ಎಂದು ಹೆಸರಿತ್ತು
ಮೀಡಿಯಾದಲ್ಲಿ ಕಸ ತುಂಬುವ ಕಾರ್ಯಕ್ರಮ
ಮತ್ತೆ ದಿನಕ್ಕೆ ಇಪ್ಪತ್ತು ಬಾರಿ ಹಣಿಕೆ ಹಾಕಿ like ಲೈಕ್ ಗಳ
ಕಮೆಂಟ್ ಗಳ ಲೆಕ್ಕ ಹಾಕುವ ಪರಿಕ್ರಮ
ಕಡಿಮೆಯಾದರೆ ಅಯ್ಯೋ ಭ್ರಮನಿರಸನ
ಹುಡುಗಿಯೊಬ್ಬಳು ಲೈಕಿಸಿದರಂತೂ ಶುದ್ಧ ಮನ್ಮಥ
ಅವಳೆಲ್ಲೋ ಇವನೆಲ್ಲೋ ದಿನಕೊಂದು ವೇಷ
ಕನಸು ಹಳವಂಡಗಳ ಜಾತ್ರೆ ಇವನ ಇಡೀ ದಿನ
ಎಲ್ಲೋ ಕಳಕೊಂಡು ಬಿಟ್ಟ ತನ್ನವರನು ಎದುರಿನವರನು
ಯಾವುದೊ ಗುಂಗಿನಲಿ ಕೈಯೊಳಗೊಂದು ಸೆಲ್ಲು
ತಗ್ಗಿಸಿದ ತಲೆ ದಿಟ್ಟಿಸುವ ಕಣ್ಣು ಸ್ಕ್ರೋಲೋ ಸ್ಕ್ರೋಲು
ಇವನ ಮಾತಿಗೆ ಅವನೊಪ್ಪದಿರೆ ಸಿದ್ಧವಿದೆ Unfriend ನಾಟಕ
ಆಶ್ಚರ್ಯವೆಂದರೆ Friend ಆಗಿದ್ದಾದರೂ ಯಾವಾಗ
ಕೊನೆಗೊಮ್ಮೆ ಜ್ಞಾನೋದಯ ಜೊತೆಗೆ ವೈರಾಗ್ಯ
‘ಏನಿದೆ ಈ ಫೇಸ್ ಬುಕ್ ಲಿ, Addict ಆದೆನೆ ನಾನು’
ತೇಲಿ ಬಿಟ್ಟ Confession Letter ತನ್ನ ಸ್ಟೇಟಸ್ ಲಿ
ನಾಳೆಯಿಂದಲಿ ನಾನಿಲ್ಲ ಈ ಫೇಸ್ ಬುಕ್ ಲಿ
ಹೊರಟಿರುವೆ ಮುಕ್ತನಾಗಿ ನನ್ನ ಬದುಕಿಗೆ ಮರಳಿ
ನೀವೆಲ್ಲ ಸುಖವಾಗಿರಿ ಮತ್ತೆ ನನ್ನ ನೆನಪಿರಲಿ
ಅದೋ ಬಂದವು ಕಮೆಂಟುಗಳು ಸಲಹೆಗಳು ಗೆಳೆಯಾ
ನೀನಿಲ್ಲದೆ ನಾವಿಲ್ಲ ದಯವಿಟ್ಟು ಇದ್ದು ಬಿಡು ಹೀಗೇ ಇಲ್ಲೇ
ಅದನೆ ಬಯಸಿದನೀತ ಬಿಡುವ ಮನಸಿರಲಿಲ್ಲ
ಮತ್ತೇಕೆ ನಾಟಕವೋ ಅರ್ಥವಾಗಲಿಲ್ಲ...
ಇದ್ದೂ ಇರದ ಹಾಗೆ ಇರಬಹುದಲ್ಲವೇ ಇಲ್ಲಿ...??
ಡಾ.ಶಿವಾನಂದ ಕುಬಸದ
೨೯-೦೪-೧೪

ಸಂಗಮೇಶ ಕೋಟಿ ಅವರ ಪದ್ಯ.'ಈಗ'

s
ಶೀರ್ಷಿಕೆ ಸೇರಿಸಿ

Tuesday 28 January 2014

ಗಣರಾಜ್ಯೋತ್ಸವ ಸನ್ಮಾನ-2014

ಸತ್ಕಾರದ ಸಂಭ್ರಮ :
-------------------
ಬಾಗಲಕೋಟ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ನನಗೆ ಇಂದು( 26.1.2014) ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಜಿಲ್ಲಾಡಳಿತ ವತಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತರಾದ ಶ್ರೀ ಶಿವಯೋಗಿ ಕಳಸದ ಅವರು ಪ್ರಶಸ್ತಿ ನೀಡಿ ಸತ್ಕರಿಸಿದರು.ಸಮಾರಂಭದಲ್ಲಿ ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಎಸ್.ಆರ್.ಪಾಟೀಲ,ಬಾಗಲಕೋಟ ಶಾಸಕರಾದ ಶ್ರೀ ಎಚ್.ವೈ.ಮೇಟಿ,ಜಿಲ್ಲಾಧಿಕಾರಿಗಳಾದ ಶ್ರೀ ಮನೋಜ ಜೈನ್,ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮೊದಲಾ ಗಣ್ಯರು ಉಪಸ್ಥಿತರಿದ್ದರು.-ಡಾ.ಪ್ರಕಾಶ ಗ.ಖಾಡೆ