Tuesday 30 April 2013

ಕನ್ನಡ ಸಾಹಿತ್ಯ ಚರಿತ್ರೆಯ ಹೊಸ ಇತಿಹಾಸ ದೇಸಿ ಮೂಲಕ ಕಟ್ಟಬೇಕಾಗಿದೆ


ಕನ್ನಡ ಸಾಹಿತ್ಯ ಚರಿತ್ರೆ :
               ಜಾನಪದದ ಮೂಲಕ ಮುರಿದು ಕಟ್ಟಬೇಕಾದ ಕನ್ನಡ ಸಾಹಿತ್ಯ ಚರಿತ್ರೆ

                                          -ಡಾ.ಪ್ರಕಾಶ ಗ.ಖಾಡೆ
         
  ಕನ್ನಡದಲ್ಲಿ ಹದಿನೇಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಸಾಹಿತ್ಯ ರಚನೆಯ ‘ಕಗ್ಗತ್ತಲ ಕಾಲ’ ಎಂದು ಹೇಳಿಕೊಂಡು ಬರಲಾಯಿತು. ‘ಇಂಗ್ಲಿಷ್ ಗೀತಗಳು’ ಕೃತಿ ಬರುವುದಕ್ಕಿಂತ ಮೊದಲು ಕನ್ನಡ ಕವಿತೆಯ ಸ್ಥಿತಿ ಹೇಗಿತ್ತೆಂದು ಸ್ವಲ್ಪಮಟ್ಟಿಗೆ ನೆನೆದರೆ ಅದರ ಪ್ರಭಾವ ಚೆನ್ನಾಗಿ ಮನದಟ್ಟಾಗುತ್ತದೆ. “ಕನ್ನಡದಲ್ಲಿ ಪ್ರೌಢಕಾವ್ಯ ರಚನೆ ಸುಮಾರು ಹದಿನೇಳುನೂರರ ವೇಳೆಗೆ ಚಿಕ್ಕದೇವರಾಯ ಒಡೆಯರ ಆಳ್ವಿಕೆಯ ಕೊನೆಯ ಹೊತ್ತಿಗೆ ನಿಂತು ಹೋಗಿತ್ತು. ಅಲ್ಲಿಂದ ಮುಂದೆ ದೌರ್ಬಲ್ಯ, ಅಸಾರತೆ, ಅನ್ಯಾಕ್ರಮಣ ಮೊದಲಾದವು ರಾಜಕೀಯ ಪ್ರಪಂಚದಲ್ಲಿ ಕಾಣಿಸಿಕೊಂಡಂತೆಯೇ ಸಾಹಿತ್ಯ ಪ್ರಪಂಚದಲ್ಲಿಯೂ ಕಾಣಿಸಿಕೊಂಡವು” ಎಂಬುದು ತೀನಂಶ್ರೀ ಅವರ ಹೇಳಿಕೆ. ಹದಿನೆಂಟನೆಯ ಶತಮಾನದ ಸಾಹಿತ್ಯವು ಮುನ್ನಿನಷ್ಟು ಸತ್ವಪೂರ್ಣವಾಗಿ ಹೊರಹೊಮ್ಮಲಿಲ್ಲ. ಅದಕ್ಕೆ ದೇಶದ ಸ್ಥಿತಿಗತಿಯೇ ಕಾರಣ. ಈ ಶತಮಾನದಲ್ಲಿ ಕರ್ನಾಟಕವನ್ನು ಬಲಿಷ್ಠÀವಾದ ರಾಜಮನೆತನವಾವುದೂ ಆಳುತ್ತಿರಲಿಲ್ಲ. ಸಾಲದಕ್ಕೆ ಪೇಶವೆ, ನಿಜಾಮ ಮುಂತಾದ ಅನ್ಯ ಭಾಷಿಕÀರ ರಾಜಸತ್ತೆಯಲ್ಲಿ ಕನ್ನಡದ ಅನೇಕ ಪ್ರದೇಶಗಳು ಸಿಕ್ಕಿಕೊಂಡಿದ್ದವು. ಕವಿಬಳ್ಳಿಗಳಿಗೆ ಬಿದಿರಿನ ಹಂದರವನ್ನಾದರೂ ಒದಗಿಸಿದ್ದ ಮೈಸೂರಲ್ಲಿ ಚಿಕ್ಕದೇವರಾಯ£ರ ಯೋಗ್ಯತೆಯುಳ್ಳ ಅರಸರು ಮುಂದಿನ ಒಂದು ಶತಮಾನದವರೆಗೆ ಯಾರೂ ಕಾಣಿಸಿಕೊಳ್ಳಲಿಲ್ಲ. ಹೈದರ, ಟಿಪ್ಪುಸುಲ್ತಾನರ ರಾಜ್ಯಭಾರದಲ್ಲಿ ನಡೆದ ಸಂಸ್ಕøತಿ ಸಂವರ್ಧನೆಯು ಹೇಳಿಕೊಳ್ಳುವಂತಹದೇನಲ್ಲ ಎಂದು ಶ್ರೀನಿವಾಸ ಹಾವನೂರ ಅವರು ತಮ್ಮ ‘ಹೊಸಗನ್ನಡ ಅರುಣೋದಯ’ದಲ್ಲಿ  ದಾಖಲಿಸುತ್ತಾರೆ.
    ಆದರೆ ಈ ಕಾಲಕ್ಕೆ ಇವೆಲ್ಲ ಸಾಹಿತ್ಯಿಕ ಚಟುವಟಿಕೆಗಳು ನಾಡಿನ ದಕ್ಷಿಣ ಭಾಗಕ್ಕೆ ಮೀಸಲಾಗಿದ್ದರೆ ಉತ್ತರದ ಆಗಿನ ನಿಜಾಮ ಕರ್ನಾಟಕದಲ್ಲಿ ಕೆಲವು ಪ್ರಸಿದ್ಧ ಹರಿದಾಸರು ಆಗಿ ಹೋದರು. ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥದಾಸ ಮತ್ತು ಪ್ರಸನ್ನ ವೆಂಕಟದಾಸರು ಪ್ರಮುಖರು. ಇವರಲ್ಲಿ ಮೂವರು 18ನೆಯ ಶತಮಾನದಲ್ಲಿಯೇ ಬಾಳಿದವರು. ಪ್ರಸನ್ನ ವೆಂಕಟದಾಸರು, ವಿಜಯದಾಸರು, ಗೋಪಾಲದಾಸರು ಒಬ್ಬೊಬ್ಬರು ಮಹಾಮಹಿಮರು. ಇವರೆಲ್ಲರಲ್ಲಿ ಕವನ ಸ್ಪೂರ್ತಿಯು ಸಹಜವಾಗಿ ಹೊರಹೊಮ್ಮಿ ಸಾವಿರಾರು ಹಾಡುಗಳ ಸೃಷ್ಟಿಯಾಯಿತು. ಹಾಡು ಕೀರ್ತನೆಗಳಲ್ಲದೆ ಕಥನ ಕವನಗಳನ್ನು ರಚಿಸಿದವರಿದ್ದಾರೆ, ಬಯಲಾಟಗಳ ಪ್ರಸಂಗ ಪಠ್ಯಗಳನ್ನು ಕಟ್ಟಿದವರಿದ್ದಾರೆ. ಸಮಸ್ತ ದಾಸ ಪೀಳಿಗೆಯವರ ಅನೇಕ ಹಾಡುಗಳು ಈ ಮುನ್ನವೆ ಮುದ್ರಿತವಾಗಿ ಅವುಗಳ ಸಮೀಕ್ಷೆ ವಿಮರ್ಶೆಗಳು ನಡೆದು ಹೋಗಿದ್ದರೆ ಈ ಶತಮಾನವನ್ನು ಕತ್ತಲೆಯ ಕಾಲವೆಂದೂ ಯಾರೂ ಹೇಳುತ್ತಿರಲಿಲ್ಲ. ವಿಜಯದಾಸ, ಗೋಪಾಲದಾಸರ ಭಾವಪೂರ್ಣ ಸುಳಾದಿಗಳು ಮತ್ತು ಜಗನ್ನಾಥದಾಸರ ‘ಹರಿಕಥಾಮೃತಸಾರ’ ಇವುಗಳನ್ನು ಕನ್ನಡಕ್ಕೆ ನೀಡಿದ 18ನೆಯ ಶತಮಾನ ಅದೆಂತು ನಿಸ್ಸತ್ವವೆನಿಸಿತು? ಎಂಬ ಹಾವನೂರ ಅವರ ಮಾತುಗಳು ಕನ್ನಡವನ್ನು ಅಖಂಡವಾಗಿ ಕಾಣುವ ಮತ್ತು ಒಂದು ಭಾಗದ ಕೊಡುಗೆಯನ್ನು ಕತ್ತಲಲ್ಲಿಟ್ಟು ನೋಡುವ ತಿಳುವಳಿಕೆಗಳನ್ನು ಎಚ್ಚರಿಸಿದಂತಿದೆ.
ಆದರೆ ಈ ತಿಳುವಳಿಕೆಗಳಿಗೆ ಉತ್ತರವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ನಡೆದ ಕನ್ನಡ ಕಾವ್ಯದ ದೇಸೀ ಕಾಣ್ಕೆಗಳನ್ನು ದಾಖಲಿಸುವ ಮೂಲಕ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮುರಿದು ಕಟ್ಟಬೇಕಾಗಿದೆ.
ಹೊಸಗನ್ನಡದ ಅರುಣೋದಯವನ್ನು ಗುರುತಿಸುವಾಗಲೂ ಜನಪದೀಯ ನೆಲೆಗಟ್ಟಿನಿಂದ ಬಂದ ಲಾವಣಿ, ತತ್ವಪದ, ಭಜನೆ ಮೊದಲಾದ ಕಾವ್ಯಗಳನ್ನು ಮತ್ತೆ ದೂರಸರಿಸಲಾಗಿರುವುದೂ ಒಂದು ದುರಂತವೆನಿಸುತ್ತದೆ. ‘ಹೊಸಗನ್ನಡದ ಅರುಣೋದಯವನ್ನು ಕೆಂಪು ನಾರಾಯಣ, ಮುದ್ದಣರಿಂದ ಆರಂಬಿsಸಿ ಹಟ್ಟಿಯಂಗಡಿ ನಾರಾಯಣರಾಯರು, ಬಿ.ಎಂ.ಶ್ರೀ. ಅವರ ರಚನೆಗಳಿಂದ ಗುರುತಿಸುವುದು ನಮಗೆ ವಾಡಿಕೆಯಾಗಿದೆ. ಆದರೆ ವಾಸ್ತವವಾಗಿ ಹೊಸಗನ್ನಡದ ಅರುಣೋದಯವನ್ನು ತತ್ತ್ವಪದಗಳು ಮತ್ತು ತತ್ತ್ವಪದಕಾರರಿಂದಲೇ ಆರಂಬಿsಸಬೇಕಾಗಿದೆ.’ಎಂಬುದು ಕಿ.ರಂ.ನಾಗರಾಜ ಅವರ ಚಿಂತನೆ. ಜನಪದ ಸಾಹಿತ್ಯವಾಗಲಿ, ವಚನ ಸಾಹಿತ್ಯವಾಗಲಿ ಪೂರ್ವಧ್ಯಾನಿತವಾದ ಅಥವಾ ಪ್ರe್ಞÁಪೂರ್ವಕವಾದ ಕಾವ್ಯಸೃಷ್ಟಿಯಲ್ಲ. ಇವರಾರಿಗೂ ತಮ್ಮ ರಚನೆಗಳು ಸಾಹಿತ್ಯವೆಂಬ ಭ್ರಮೆ ಇರಲಿಲ್ಲ. ವಚನಗಳು ಸೃಷ್ಟಿಯಾದ 500 ವರ್ಷಗಳ ನಂತರ ಅದಕ್ಕೆ ಸಾಹಿತ್ಯವೆಂಬ ಮನ್ನಣೆ ಲಬಿsಸಿದೆ. ಅಂತೆಯೇ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದ್ದಾಗ ಮೂಡಿ ಬಂದ ಕನ್ನಡದ ತತ್ವಪದಗಳು ಮತ್ತು ತತ್ವಪದಕಾರರು ಇದುವರೆಗೆ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಯ ಪ್ರತಿಷ್ಠಿತ ಗ್ರಂಥಗಳಲ್ಲಿ ಸ್ಥಾನಗಿಟ್ಟಿಸಿಲ್ಲದಿರುವುದು ಕಾಣುತ್ತೇವೆ.
ಇಲ್ಲಿ ನಡೆದ ದೇಸೀ ಕಾವ್ಯ ಪ್ರಕ್ರಿಯೆಯು ತೀನಂಶ್ರೀ ಅವರ ಗಮನಕ್ಕೆ ಬಾರದೇ ಹೋಗಿರುವುದು ಈ ಕಾಲವನ್ನ ‘ಅಸಾರತೆ’ ಎಂದು ಸಾರಲಾಯಿತು. 18, 19ನೆಯ ಶತಮಾನಗಳು ಕನ್ನಡದಲ್ಲಿ ಅಪಾರ ಸಂಖ್ಯೆಯ ಕಥನಗೀತಗಳೂ, ಲಾವಣಿಗಳೂ, ಮಹಾಕಾವ್ಯಗಳೂ, ತತ್ವಪದಗಳೂ ರಚನೆಯಾದ ಕಾಲ ಎಂಬುದು ತೀನಂಶ್ರೀ ಅವರಿಗೆ ಯಾಕೆ ಹೊಳೆಯಲಿಲ್ಲವೊ? ಅವರ ಕಾಲಕ್ಕೆ ಅಂತಹ ಸಾಹಿತ್ಯ ಸಂಗ್ರಹವೂ ಆಗಿತ್ತು. ಸ್ವತಃ ಅವರೂ ಜನಪದ ಸಾಹಿತ್ಯದ ಮೇಲೆ ಬರವಣಿಗೆ ಮಾಡಿದವರಾಗಿದ್ದರು ಬಹಳ ಸರಳವಾಗಿ ಇದು ಶಿಷ್ಟ ಸಾಹಿತ್ಯ ಚರಿತ್ರೆಕಾರರ ಪೂರ್ವಗ್ರಹಿಕೆ, ಅನಾಮತ್ತಾಗಿ ಇಂಗ್ಲಿಷ್ ರೊಮ್ಯಾಂಟಿಕ್ ಕೃಷಿ ಮಾಡಲಾರಂಬಿsಸಿದ ಸಾಹಿತಿಗಳಿಗೆ, ವಿಚಾರವಂತರಿಗೆ ಸ್ಥಳೀಯವಾದ ಈ ಮೌಖಿಕ ಸಂಪ್ರದಾಯಗಳು ಮೈಲಿಗೆ ಎನಿಸಿದ್ದವು. ಇಂಗ್ಲಿಷಿನಲ್ಲಿ ವ್ಯವಹರಿಸುವುದೇ ಗೌರವ ಮತ್ತು ನಾಗರಿಕ ಲಕ್ಷಣ ಎನ್ನುವ ವಸಾಹತು ಪ್ರe್ಞÉ ಸ್ಥಳೀಯವಾದದ್ದನ್ನು ಉಪೇಕ್ಷೆಗೆ ಒಳಗಾಗುವಂತೆ ಮಾಡಿತು. ಇಂದಿನ ಸಂದರ್ಭದಲ್ಲಿ ನಿಂತು ಉಪಲಬ್ಧವಾಗುತ್ತಿರುವ ಸ್ಥಳೀಯ ಸಾಂಸ್ಕøತಿಕ ಆಕರಗಳ ಹಿನ್ನೆಲೆಯಲ್ಲಿ 18-19ನೆಯ ಶತಮಾನವನ್ನು ಪುನರಾವಲೋಕಿಸುವುದು ಜರೂರಾಗಿದೆ. ಹೀಗೆ ಬರಡು ಕಾಲವೆಂದು ಹೇಳಿಕೊಂಡು ಬರಲಾಗಿದ್ದ ಸಂದರ್ಭದಲ್ಲಿ ಇಲ್ಲಿ ಜನಪದ ನೆಲೆಗಟ್ಟಿನಲ್ಲಿ ಮೂಡಿಬಂದ ಸಾಹಿತ್ಯವನ್ನು ಒಪ್ಪಿಕೊಳ್ಳದೆ ಹಾಗೂ ಗುರುತಿಸಿ ಮನ್ನಣೆ ನೀಡದೆ ಹೋಗಲಾಯಿತು.
ಈ ಅಪಾಯಕಾರಿ ಚಿಂತನಾ ಕ್ರಮಗಳು ಹುಟ್ಟುಹಾಕಿದ ಸಂದರ್ಭಗಳು ಒಟ್ಟು ಜನಪದರ ಕಾಣ್ಕೆಯನ್ನು ನಿರ್ಲಕ್ಷಿಸಿದವು. ದೇಶಿಯ ಕಾವ್ಯವನ್ನೂ ಕಟ್ಟಿದ ಯಾರೂ ಆಧುನಿಕ ಚಿಂತಕರಿಗೆ ಶ್ರೇಷ್ಠರಾಗಿಕಾಣಲಿಲ್ಲ. ಹೋಗಲಿ ಅವರ ಮೌಲ್ಯಯುತ ಸಾಧನೆಗೆ ತಕ್ಕುದಾದ ಗೌರವವನ್ನೂ ಕೊಡಲಿಲ್ಲ. ಅಸಾರತೆ ಮತ್ತು ಸ್ಥಗಿತಗೊಂಡ ಕಾಲವೆಂದು ಹೇಳುವ ಕಾಲಘಟ್ಟದಲ್ಲಿಯೇ ಇವರು ಹುಟ್ಟುಹಾಕಿದ ದೇಸೀತನ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡಿತ್ತೆಂದೆ ಹೇಳಬೇಕು. ಯಾಕೆಂದರೆ ಈ ಕಾಲಘಟ್ಟದಲ್ಲಿಯೇ ಸಾಧು ಸಂತರು, ತತ್ವ್ನ್ತಪದಕಾರರು, ಬುಡಕಟ್ಟು ನಾಯಕರು, ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ, ಅದರ ಜೀವ ವಿರೋದಿs ನೆಲೆಗಳ ವಿರುದ್ಧ ತಮ್ಮ ತಮ್ಮ ಅನುಭಾವಿಕ ನೆಲೆಯಿಂದ ಲೋಕಾನುಭವದಿಂದ ಖಂಡಿಸಿದವರು, ಚಳುವಳಿ ಮಾಡಿದವರು. ಆ ಮೂಲಕ ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು, ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿದವರು. ಪ್ರಭುತ್ವ ವಿರೋದಿs ನೆಲೆಗಳನ್ನು ಎತ್ತಿ ಹಿಡಿದ ಇವರು ನವೋದಯ ಸಂದರ್ಭದ ಪ್ರಮುಖ ಧಾರ್ಮಿಕ ನಿಲುವಾದ ಧರ್ಮ ನಿರಪೇಕ್ಷಕ ನೆಲೆಗೆ ತಳಹದಿ ಹಾಕಿಕೊಟ್ಟವರು. ಈ ಸೆಳಕುಗಳು ಲಾವಣಿಕಾರರಿಗೂ ಪ್ರಮುಖ ಪ್ರೇರಣೆಯಾಗಿದ್ದವು. ಸ್ಥಳೀಯ ಚಾರಿತ್ರಿಕ ಹಾಗೂ ಸಾಂಸ್ಕøತಿಕ ಸಂಗತಿಗಳಿಗೆ ಮಹತ್ವಕೊಟ್ಟು ಜನರೊಡಲಿಂದ ಹುಟ್ಟಿಬಂದ ಸ್ವಾನುಭವ ಪ್ರಧಾನವಾದ ದೇಸೀ ಪರವಾಗಿ ಅರಳಿಕೊಂಡಿದ್ದ ಈ ನೀತಿ ಸಂಪ್ರದಾಯದಂಥ ಎಷ್ಟೊ ಸ್ಥಳೀಯ ಅಬಿsವ್ಯಕ್ತಿಗಳನ್ನು ಇಲ್ಲಿ ನಿರ್ಲಕ್ಷಿಸಲಾಯಿತು. ಪಾಶ್ಚಾತ್ಯ ಸಿದ್ಧಾಂತಗಳ ಮೇಲೆ ರೂಪುಗೊಂಡ ನವೋದಯ ಚಳುವಳಿಗಳು ಇಂಥ ದೇಸೀತನಗಳನ್ನು ಉಪೇಕ್ಷೆ ಮಾಡಿದವು. ಸಮಾಜಮುಖಿ ಚಲನೆಗಿಂತ ವ್ಯಕ್ತಿ ಕೇಂದ್ರಿತ ಚಿಂತನಾಕ್ರಮಕ್ಕೆ ಇಲ್ಲಿ ಪ್ರಾಧಾನ್ಯ ದೊರಕಿತು. ಹಳೆಯದೆಲ್ಲಾ ವಿಸ್ಮ್ನೃತಿಗೊಳಗಾಯಿತು ಎಂಬುದನ್ನು ಡಾ.ವೀರೇಶ್ ಬಡಿಗೇರ ಸ್ಪಷ್ಟವಾಗಿಯೇ ಗುರುತಿಸುತ್ತಾರೆ.
ಹೀಗೆ ಲಾವಣಿ, ತತ್ತ್ವಪದ ಮೊದಲಾದ ಸ್ಥಳೀಯ ಕಾವ್ಯ ಪ್ರಕಾರಗಳು ಒಂದೆಡೆ ಈ ನೆಲೆಯಲ್ಲಿ ತಮ್ಮ ಅಸ್ತಿತ್ವ ರೂಪಿಸಿಕೊಳ್ಳುವ ಹೊತ್ತಿನಲ್ಲಿ ನಾವು ಯಾವುದನ್ನೂ ಆಧುನಿಕವೆಂದು ಕರೆದುಕೊಂಡು ಬಂದೆವೋ, ಅವು ಈ ನೆಲದ ಇಂಥ ಪ್ರೇರಣೆಗಳಿಂದ ಹೊರತಾಗಲಿಲ್ಲ. ಒಂದೆಡೆ ಪಶ್ಚಿಮದ ಕಾವ್ಯರೂಪಗಳಿಂದ ಪ್ರಭಾವಿತರಾಗಿ ಅವುಗಳಿಗೆ ಸಂವಾದಿಯಾಗಿ ಹೊಸ ರೂಪಗಳನ್ನು ಕನ್ನಡದಲ್ಲಿ ಆವಿಷ್ಕಾರಮಾಡುವ ಪ್ರಯತ್ನಗಳು ಅನುವಾದ, ರೂಪಾಂತರ, ಅಳವಡಿಕೆ ಇತ್ಯಾದಿಗಳ ಮೂಲಕ ಕೆಲವರಿಂದ ಪ್ರಾರಂಭವಾದರೂ ಈ ಹೊಸ ರೂಪಗಳ ಒಳಕ್ಕೆ ತುಂಬಿಕೊಳ್ಳಬೇಕಾದ ಹೂರಣ ಈ ನೆಲದ ಮಣ್ಣಿನಿಂದ ಬೆಳೆದುಕೊಂಡಿದ್ದೇ ಆಗಿರಬೇಕೆಂಬ ತಿಳಿವು ಇಂಥ ಹಿನ್ನೆಲೆಯಲ್ಲಿತ್ತೆಂಬುದು ಮಹತ್ವದ ಸಂಗತಿಯಾಗಿದೆ. ಕನ್ನಡದಲ್ಲಿ ಕಾಲಕಾಲಕ್ಕೆ ಕಾಣಿಸಿಕೊಂಡ ಇಂಥ ಹೊಸ ರೂಪಗಳಿಗೆ ಜಾನಪದ ನೀಡಿದ ಪ್ರೇರಣೆ, ಪ್ರಭಾವಗಳು ಅದರ ಪ್ರಾಧಾನ್ಯವನ್ನು ಸಾರುತ್ತವೆ.
ಜನಪದ ಹಾಡು ಪರಂಪರೆಯಲ್ಲಿನ ಮೌಖಿಕ ಸೃಷ್ಟಿ ಕ್ರಿಯೆಯನ್ನು ಅಕ್ಷರ ಲೋಕಕ್ಕೆ ತಂದಾಗ ಅವುಗಳ ಪಠ್ಯೀಕರಣ ಜರುಗಿತು. ಸಂಗ್ರಹ, ಸಂಪಾದನೆಗಳು ನಡೆದಾಗ ಜನಪದ ಗೀತ ಪ್ರಕಾರಗಳು, ನಾಲಗೆಯಿಂದ ನಾಡವರಿಗೆ ಅಕ್ಷರ ರೂಪವಾಗಿ ಕಣ್ಣ ನೋಟಕ್ಕೆ ಸಿಕ್ಕಾಗ ಓದುವ, ಓದಿ ತಿಳಿದುಕೊಳ್ಳುವ ಬಗೆ ಸಾರ್ವತ್ರಿಕವಾಯಿತು. ಅವುಗಳ ಶ್ರೇಷ್ಠತೆಯ ಅರಿವಾಗತೊಡಗಿತು. ಹಳ್ಳಿಯ ಲಾವಣಿ ಸಾಂಗತ್ಯಗಳನ್ನು ಉತ್ಸಾಹಶಾಲಿಗಳು ಹೊಸದಾಗಿ ಕೂಡಿಸಿ ಪ್ರಕಟಿಸಿದಾಗಲೆಲ್ಲಾ ಸಾಹಿತ್ಯ ಬೆಳವಣಿಗೆಗೆ ಮಹೋಪಕಾರವಾಗಿದೆ. ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಈ ಬಗೆಯ ಕಾರ್ಯವು ಕವಿತೆಯ ಪುನರುಜ್ಜೀವನಕ್ಕೆ ಸಹಕಾರಿಯಾಯಿತು. ನಮ್ಮ ಸಾಹಿತ್ಯದಲ್ಲಿಯೂ ಅದಕ್ಕೆ ನಿದರ್ಶನವನ್ನು ಆಗಲೇ ಅಂಬಿಕಾತನಯದತ್ತರ ಪ್ರಣಯ ಗೀತೆಗಳಲ್ಲಿ ಗುರುತಿಸಬಹುದು. ಜನಪದ ಸಾಹಿತ್ಯದ ಸಂಗ್ರಹ, ಪ್ರಕಟಣ ಕಾರ್ಯಗಳಲ್ಲಿ ಧಾರವಾಡ ಗೆಳೆಯರ ಗುಂಪಿನ ಈ ಕವಿಗಳು ಹಳ್ಳಿಯ ಪದಗಳ ಜೀವಾಳವನ್ನು ಚೆನ್ನಾಗಿ ಹೀರಿ, ಅದನ್ನೇ ತಮ್ಮ ವಾಣಿಯಲ್ಲಿ ಆಡಿಸುತ್ತಿರುವುದು ಆಶ್ಚರ್ಯವೇನೂ ಅಲ್ಲ ಎಂಬುದನ್ನೇ ಮುಂದೆ ತೀನಂಶ್ರೀ ಅವರೇ ನಿರೂಪಿಸಬೇಕಾಯಿತು.
ಒಟ್ಟು ಈ ಚಿಂತನೆಗಳು ಕನ್ನಡ ಕಾವ್ಯ ಪಡೆದುಕೊಂಡು ಬಂದ ಪ್ರೇರಣೆ, ಪ್ರಭಾವಗಳಿಗೆ  ದೇಶೀಯ ಕಾಣ್ಕೆಯನ್ನು ದೂರವಿಟ್ಟು ನೋಡದೆ, ಅದರ ಒಳಗಡೆಯೇ ನಡೆಯುತ್ತಿದ್ದ ಈ ಚಲನಶೀಲತೆಯನ್ನು ಕಾವ್ಯದ ಜೀವಂತಿಕೆಗೆ ಕಾರಣವಾದ ಸಂದರ್ಭಗಳನ್ನು ಪುಷ್ಟೀಕರಿಸಿದಂತಾಗುತ್ತದೆ. “ವಸಾಹತೀಕರಣಗೊಂಡ ದೇಶಗಳಲ್ಲಿ ವಿಜೇತರ ಸಂಸ್ಕøತಿಯ ಮಾದರಿಗಳು ವಿವೇಚನೆಯಿಲ್ಲದೆ ಪಡೆಯುವಂತೆ ಸಾಹಿತ್ಯ ತತ್ವಗಳನ್ನು ಪಡೆದುಕೊಂಡಾಗ ನಿರ್ಮಾಣಗೊಳ್ಳುವ ಅತಂತ್ರಭಾವನೆಯೇ ದೇಶೀವಾದದ ಒಲವಿಗೆ ಕಾರಣವಾಗಿದೆ. ಕನ್ನಡ ನವೋದಯದ ಕೂಸನ್ನು ಶೆಲ್ಲಿ, ವಡ್ಸ್‍ವರ್ತ್, ಬ್ರಾಡ್ಲೆಯರ ಸಾಹಿತ್ಯತತ್ವಗಳ ತೊಟ್ಟಿಲು ಪೆÇರೆಯಿತು” ಎಂದು ಹೇಳುವ ರಹಮತ್ ತರೀಕೆರೆ  ಅವರು “ಆದರೂ ನವೋದಯದ ಬರಹಗಾರರು ದೇಶೀ ಪರಂಪರೆಯ ಹೊಕ್ಕಳು ಬಳ್ಳಿಯನ್ನು ಕತ್ತರಿಸಿಕೊಂಡಿರಲಿಲ್ಲ” ಎನ್ನುವಲ್ಲಿ ನವೋದಯಕ್ಕೆ ಜೀವ ಚೇತನವನ್ನು ದೇಶೀಯತೆಯೇ ನೀಡಿತೆನ್ನುವುದನ್ನು ಪ್ರಧಾನವಾಗಿ ಪ್ರಮಾಣಿಕರಿಸುವುದಿದೆ.
 “ಕನ್ನಡ ನವೋದಯ ಕಾವ್ಯ ರೂಪ ತಾಳುವ ಹೊತ್ತಿನಲ್ಲಿ ಎರಡು ಸಂಸ್ಕøತಿಗಳು ಮುಖಾಮುಖಿಯಾದದ್ದರ ಪರಿಣಾಮಗಳನ್ನು ಎದುರಿಸಬೇಕಾಯಿತು. ತನ್ನದು, ತಾನು ಎಂದು ಅನುಭವವಾಗುತ್ತಿದ್ದ ಕಾಲದಲ್ಲಿ, ಬೇರೊಂದು ದೇಶವು ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡು ನಾವು ಗುಲಾಮರಾದುದರ ಪರಿಣಾಮಗಳು ಕಾಣಿಸಿಕೊಳ್ಳತೊಡಗಿದ ಕಾಲದಲ್ಲಿ ಎರಡೂ ಏಕಕಾಲಕ್ಕೆ ಭಾರತದಲ್ಲಿ ಸಂಭವಿಸಿದವು. ಕನ್ನಡಿಗರ ಮಟ್ಟಿಗೆ ಇವೆರಡನ್ನೂ ಸಾಹಿತ್ಯದಲ್ಲಿ ಸ್ವೀಕರಿಸಿ ಬದುಕಿನ ಸಂದರ್ಭದಲ್ಲಿಟ್ಟುಕೊಂಡ ಸಾಧನೆ ನವೋದಯ ಸಾಹಿತ್ಯದ್ದು, ಅಲ್ಲದೆ ಹಳೆಯದರಲ್ಲಿ ಹೊಸದನ್ನು ಒಂದುಗೂಡಿಸಿಕೊಂಡು ಹಿತಮಿತವಾದ ಹೊಸತನವನ್ನು ಸಾದಿsಸಬೇಕು ಎಂಬ ಸಮದೃಷ್ಟಿಯೂ ಈ ಸಾಹಿತ್ಯಕ್ಕೆ ಬಂದಿತು. ಕನ್ನಡ ಸಂಸ್ಕøತಿಯ ಉತ್ತಮಾಂಶಗಳಲ್ಲಿ ಸಾವಿರಾರು ವರ್ಷಗಳಿಂದ ಈ ದೃಷ್ಟಿ ಬೆಳೆದು ಬಂದಿತ್ತು. ಹೊಸತನ ಅತಿರೇಕಗಳಿಗೆ ಇದು ಬಹುಮಟ್ಟಿಗೆ ಕಡಿವಾಣಹಾಕಿತು. ಹೀಗೆ ಹೊರಗಿನ ಪ್ರಭಾವಗಳಿಗೆ ಒಳಗಿನ ಪ್ರೇರಣೆ ಮತ್ತು ಪರಂಪರೆಯಿಂದ ಬಂದ ಸಮನ್ವಯ ದೃಷ್ಟಿ ಇವು ಕೂಡಿಕೊಂಡು ಹೊಸಗನ್ನಡ ಸಾಹಿತ್ಯದ ಜನನಕ್ಕೆ ಕಾರಣವಾದವು. ನವೋದಯ ಕಾವ್ಯ ಈ ನೆಲದ ಒಳಗಿನ ಜೀವಸತ್ವ ಪಡೆದುಕೊಂಡು ರೂಪ ತಾಳುವ ಸಂದರ್ಭ ವಸಾಹತುಶಾಹಿಯ ಪ್ರಭಾವಿ ಅನುಕರಣೆ ಒಂದು ಬಗೆಯ ಸಂಕರಸೃಷ್ಟಿಗೆ ಕಾರಣವಾದುದ್ದನ್ನು ಸಾರುತ್ತದೆ.
ಜಾನಪದ ಎಲ್ಲವನ್ನೂ ಒಳಗೊಂಡದ್ದು ಇಲ್ಲಿ ಹಿಂದಿನಿಂದಲೂ ಪ್ರವಹಿಸಿಕೊಂಡು ಬಂದ ಜನಪದ ಕಾವ್ಯ ಪ್ರಕಾರಗಳು, ತತ್ವಪದಗಳು, ಲಾವಣಿ ಮೊದಲಾದ ಜನಪದ ಗೀತ ಪ್ರಕಾರಗಳಂತೆ ನವೋದಯ ಕಾವ್ಯ ದೈನಂದಿನ ಸರಳ ಸಾಧಾರಣ ಬದುಕೂ ಸಂಗತಿಯೂ ಕಾವ್ಯವಾಗಬಲ್ಲದು ಎಂಬುದನ್ನೂ ತೋರಿಸಿತು. ನವೋದಯ ಕವಿಗಳ ಭಾಷಾ ಸಾಮಗ್ರಿಯಲ್ಲಿ ಸಂಸ್ಕøತ, ಹಳಗನ್ನಡ, ಜಾನಪದ, ದೈನಂದಿನ ಶಿಷ್ಟ ಭಾಷೆ ಇತ್ಯಾದಿಗಳು ಮಿಳಿತವಾಗಿವೆ. ಜನಪದರು ಪ್ರಕೃತಿ ಆರಾಧಕರು. ಪ್ರಕೃತಿ ಅವರ ಉಸಿರು. ಪ್ರಕೃತಿಯ ಗಿಡ, ಮರ, ಹೊಳೆ, ಹಳ್ಳ, ಸೂರ್ಯ, ಚಂದ್ರ, ಕಲ್ಲು ಮಣ್ಣು ಅವರ ಆರಾಧನಾ ದೈವಗಳು. ಅದನ್ನು ತಮ್ಮ ಹಾಡುಗಳಲ್ಲಿ ಮನದಣಿಯೆ ಹಾಡಿ ಭಕ್ತಿಯ ಪರಾಕಾಷ್ಠೆಯನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದರು. ನವೋದಯ ಕಾವ್ಯವು ಕಾವ್ಯವಸ್ತುವನ್ನು ಪ್ರಾಚೀನ, ಇತಿಹಾಸ, ಪುರಾಣಾದಿಗಳಿಂದ ನಿಸರ್ಗಕ್ಕೆ ಸ್ಥಳಾಂತರಿಸಿತು. ಮತಧರ್ಮದ ಸ್ಥಾನವನ್ನು ಸೌಂದರ್ಯಧರ್ಮ ಆಕ್ರಮಿಸಿಕೊಂಡಿತು. ಜನಪದರಂತೆ ನಿಸರ್ಗವೇ ನವೋದಯ ಕವಿಗಳ ಕಾವ್ಯ ಸಿದ್ದಿಗೆ ಮುಖ್ಯವಸ್ತುವಾಯಿತು.
           ಒಟ್ಟಾರೆ ಹೊಸಗನ್ನಡ ಕಾವ್ಯ ಹಂತ ಹಂತದಲ್ಲೂ ಪಾಶ್ಚಾತ್ಯ ಪ್ರೇರಣೆಯಿಂದಲೇ ಹೊಸ ರೂಪಗಳನ್ನು ಆವಿಷ್ಕಾರಗೊಳಿಸಿಕೊಂಡಿತೆನ್ನುವುದನ್ನು ಬದಿಗಿಟ್ಟು ಕನ್ನಡದ ಸಂದರ್ಭದಲ್ಲಿ  ಮೂಡಿದ , ಹಲವು ನೆಲೆಗಳಲ್ಲಿ ನಡೆದ ಪ್ರಯೋಗಗಳು ಮುಖ್ಯವಾಗಬೇಕಿದೆ. ಸ್ಥಳೀಯ ಕಾವ್ಯ ಸಂವಹನ ಉಂಟುಮಾಡಿದ ಜಾಗೃತಿಯ ಕಾರಣವಾಗಿ ಇಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಒಳಗಡೆ ನಡೆದ ಹೊಸ ಸಂಸ್ಕøತಿಯ ಬೇರಿನಾಳಕ್ಕೆ ಇಳಿದ ದೇಸೀ ಸಂಸ್ಕøತಿಯ ಜೀವರಸ ಒಟ್ಟು ಚೇತನಕ್ಕೆ ಕಾರಣವಾಯಿತು. ಹಾಗಾಗಿ ಹೊಸತನದ ವೈಭವೀಕರಣದಲ್ಲಿ ಮರೆಯಲ್ಲಿ ಉಳಿದ ಸ್ಥಳೀಯ ಕಾವ್ಯ ಪ್ರಕಾರಗಳನ್ನು ನಿರ್ಲಕ್ಷಿಸದೆ ಪ್ರಧಾನ ಆಕರವಾಗಿ ಕಾಣುವ ಮತ್ತು ದಾಖಲಿಸುವ ಕೆಲಸ ತುರ್ತು ನಡೆಯಬೇಕಾಗಿದೆ.    *     

Wednesday 24 April 2013

ಪ್ರತಿಕ್ರಿಯೆ-ಶ್ರೀ ಗೋಪಾಲ ವಾಜಪೇಯಿ


  

ಡಾ.ರಾಜ್,ಧುತ್ತರಗಿ ಮತ್ತು ಸಂಪತ್ತಿಗೆ ಸವಾಲ್-
ಲೇಖನಕ್ಕೆ ಶ್ರೀ ಗೋಪಾಲ ವಾಜಪೇಯಿ ಅವರ ಆಪ್ತ ಪ್ರತಿಕ್ರಿಯೆ-
ಅವಧಿಯಲ್ಲಿ-24.04.2013
ಕನ್ನಡದ ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿಯವರು ಅತ್ಯಂತ ಸರಳ ಸ್ವಭಾವದ ಸ್ನೇಹಶೀಲ ವ್ಯಕ್ತಿ. 1987-90ರ ಅವಧಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಅವರೊಂದಿಗೆ ನಾನೂ ಒಬ್ಬ ಕಿರಿವಯದ ಸದಸ್ಯ. ಅವರ ನಾಟಕಗಳನ್ನು ವೃತ್ತಿರಂಗಭೂಮಿಯ ಮೇಲೆ ನೋಡಿ ಪ್ರಭಾವಿತನಾಗಿದ್ದ ನಾನು ಆ ಮೂರು ವರ್ಷಗಳಲ್ಲಿ ಅವರಿಗಿದ್ದ ಸಾಮಾಜಿಕ ಕಳಕಳಿಯ ಅರಿವು ಮಾಡಿಕೊಂಡೆ.
ಅಕಾಡೆಮಿಯ ಮೀಟಿಂಗುಗಳಲ್ಲಿ ಅವರಿದ್ದರೆ ತಿಳಿಹಾಸ್ಯಕ್ಕೇನೂ ಕೊರತೆಯಿರುತ್ತಿರಲಿಲ್ಲ. ಒಂದು ಕಡೆ ಅವರು, ಮತ್ತೊಂದು ಕಡೆ ಯೋಗಣ್ಣ, ಇನ್ನೊಂದು ಕಡೆ ಪರ್ವತವಾಣಿ. ಮಜವಾಗಿರುತ್ತಿತ್ತು ಆ ಹಿರಿಯರೆಲ್ಲರ ಸಾಂಗತ್ಯ.
ನಾವು ಅಕಾಡೆಮಿಯಿಂದ ಬಾಗಲಕೋಟೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ನಾಟಕೋತ್ಸವವನ್ನು ಏರ್ಪಡಿಸಿದಾಗ ಧುತ್ತರಿಗಿಯವರು ಆ ಎಲ್ಲ ದಿನಗಳೂ ನಮ್ಮೊಂದಿಗಿದ್ದರು. ಹುಬ್ಬಳ್ಳಿಯಲ್ಲಿ ರಂಗತಂತ್ರಗಳ ತರಬೇತಿ ಶಿಬಿರ ‘ನೇಪಥ್ಯ ಶಿಲ್ಪ’ವನ್ನು ಹಮ್ಮಿಕೊಂಡಾಗ ಬಂದು ನೋಡಿ ಸಲಹೆ ಸೂಚನೆಗಳನ್ನು ಕೊಟ್ಟಿದ್ದರು. ಬೆಂಗಳೂರಿಗೆ ಕಾರ್ಯನಿಮಿತ್ತ ಬಂದರೆ ಅವರು ಉಳಿಯುತ್ತಿದ್ದದ್ದು ಚಿಕ್ಕಪೇಟೆ ರಸ್ತೆಯ ಒಂದು ವಸತಿಗೃಹದಲ್ಲಿ. ಅಲ್ಲಿದ್ದುಕೊಂಡೇ ರಾಜ್ ಅವರ ಮನೆಗೆ ಹೋಗಿ ಕಥೆ ಹೇಳಿ ಬಂದ ಒಂದೆರಡು ಸಂದರ್ಭಗಳಲ್ಲಿ ನಾನು ಅವರೊಂದಿಗೆ ಊಟ ಮಾಡಿದ್ದಿದೆ.
ನಾನು ‘ನಾಗಮಂಡಲ’ ನಾಟಕ ಪ್ರಯೋಗಕ್ಕೆ ಬರೆದ ಹಾಡುಗಳ ಬಗ್ಗೆ ಅವರು ತುಂಬ ಸಂತಸ ವ್ಯಕ್ತಪಡಿಸಿದ್ದರು. ಮುಂದೆ ಅವು ಕ್ಯಾಸೆಟ್ ರೂಪದಲ್ಲಿ ಬಂದಾಗ ನಮ್ಮ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಒಂದು ಕ್ಯಾಸೆಟ್ಟನ್ನು ಅವರಿಗೆ ಕೊಟ್ಟರಂತೆ. ಅದರಲ್ಲಿಯ ಒಂದರೆಡು ಹಾಡುಗಳನ್ನು ಅವರ ಪತ್ನಿ ಶ್ರೀಮತಿ ಸರೋಜಮ್ಮ ಧುತ್ತರಗಿ ಮತ್ತು ಅವರ ಪುತ್ರಿ ತಮ್ಮ ನಾಟಕಗಳಲ್ಲಿ ಬಳಸಿಕೊಳ್ಳುತ್ತಿದ್ದರಂತೆ. ಆ ಕುರಿತು ಸಿ. ಅಶ್ವಥ್ ಅವರ ಅರವತ್ತರ ಸನ್ಮಾನ ಗ್ರಂಥ ‘ತಂಬೂರಿ’ಯಲ್ಲಿ ಸರೋಜಮ್ಮ ನೆನಪಿಸಿಕೊಂಡಿದ್ದಾರೆ.
ಈಗ ಆರೇಳು ವರ್ಷಗಳ ಹಿಂದೆ ಪಿ.ಬಿ.ಧುತ್ತರಗಿಯವರ ಸ್ವಾಸ್ಥ್ಯ ಬಹಳಷ್ಟು ಕೆಟ್ಟಿತು. ಅವರು ಆಸ್ಪತ್ರೆಯೊಂದರಲ್ಲಿ ನಿರಂತರ ಚಿಕಿತ್ಸೆಗೆ ಒಳಗಾಗಬೇಕಾಯಿತು. 2007 ನವೆಂಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದ ನೇರ ಪ್ರಸಾರವನ್ನು ನಾನು ದೂರದ ಹೈದರಾಬಾದಿನಲ್ಲಿ ಕೂತುಕೊಂಡೇ ನೋಡುತ್ತಿದ್ದೆ. ವೇದಿಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ ಅವರ ಜತೆ ಸರೋಜಮ್ಮ ಧುತ್ತರಗಿಯವರು ಕುಳಿತು ಸಂಭ್ರಮಿಸುತ್ತಿರುವ ಚಿತ್ರವನ್ನು ನಾನು ನೊಡುತ್ತಿದ ಹಾಗೆಯೇ ಕೆಳಗೆ ‘ಸ್ಕ್ರಾಲ್’ನಲ್ಲಿ ”ಕನ್ನಡದ ಖ್ಯಾತ ವೃತ್ತಿರಂಗಭೂಮಿ ನಾಟಕಕಾರ ಪಿ.ಬಿ. ಧುತ್ತರಗಿ ಇನ್ನಿಲ್ಲ” ಎಂಬ ವಾರ್ತೆ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು.

Tuesday 23 April 2013

'ಅವಧಿ' ಯಲ್ಲಿ ಲೇಖನ :ರಾಜ್,ಧುತ್ತರಗಿ ಮತ್ತು ಸಂಪತ್ತಿಗೆ ಸವಾಲ್.


ಡಾ.ಪ್ರಕಾಶ ಗ.ಖಾಡೆ
ಡಾ.ರಾಜಕುಮಾರ ಅವರಿಗೆ ಹೆಸರು,ಕೀರ್ತಿ ಮತ್ತು ಹೊಸ ಇಮೇಜ್ ತಂದ ಚಲನಚಿತ್ರ ‘ಸಂಪತ್ತಿಗೆ ಸವಾಲು’. ಈ ‘ಸಂಪತ್ತಿಗೆ ಸವಾಲು’ ನಾಟಕ ಬರೆದವರು ಕನ್ನಡದ ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿಯವರು. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಪಿ.ಬಿ.ಧುತ್ತರಗಿಯವರ ಊರು. ಐವತೆರಡಕ್ಕಿಂತಲೂ ಹೆಚ್ಚು ನಾಟಕಗಳನ್ನು ರಚಿಸಿ ಹೆಸರಾದವರು. ಸಂಪತ್ತಿಗೆ ಸವಾಲು ನಾಟಕವು ದುತ್ತರಗಿಯವರ ಹೆಸರು ನಾಡಿನ ಉದ್ದಗಲಕ್ಕೂ ಪಸರಿಸುವಂತೆ ಮಾಡಿ ಅವರಿಗೆ ಮಾನ ಸನ್ಮಾನ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿದೆ.
ಹಣವುಳ್ಳ ಶ್ರೀಮಂತರು ಬಡವರನ್ನು ಹೇಗೆ ಶೋಷಿಸುತ್ತಾರೆ ಎನ್ನುವ ವಾಸ್ತವಿಕ ಬದುಕಿನ ಚಿತ್ರಣವೇ ಈ ನಾಟಕದ ಮುಖ್ಯ ಕಥಾ ವಸ್ತು. ಗ್ರಾಮೀಣ ಪ್ರದೇಶದಲ್ಲಿ ಧನಿಕರ ಧನಮದ, ಅಧಿಕಾರದ, ಅಹಂಕಾರ, ಜಾತಿಯಪ್ರತಿಷ್ಠೆ, ದೌರ್ಜನ್ಯ, ಕ್ರೂರತನ,ಕಾಮುಕತನ,ಅನ್ಯಾಯ,ಅಧರ್ಮ,ಅನೀತಿ,ಹಿಂಸೆ,ಶೋಷಣೆ ಮೊದಲಾದವುಗಳನ್ನು ಈ ನಾಟಕದಲ್ಲಿ ಚಿತ್ರಿಸುವುದರೊಂದಿಗೆ ಇಂಥ ಸಿರಿವಂತರ ಸೊಕ್ಕು ಅಡಗಿಸುವಲ್ಲಿ ನಾಟಕದ ನಾಯಕ ತೋರುವ ದಿಟ್ಟತನ ಪ್ರೇಕ್ಷರನ್ನು ಹುಚ್ಚೆಬ್ಬಿಸುವಂತೆ ಮಾಡುತ್ತದೆ.ಸಂಪತ್ತಿಗೆ ಸವಾಲು ನಾಟಕವು ಮೊದಲು ಜಮಖಂಡಿ ತಾಲೂಕು ರಬಕವಿಯಲ್ಲಿ 1964-65 ರಲ್ಲಿ ಪ್ರಯೋಗ ವಾಯಿತು.ಅಲ್ಲಿ 60 ಪ್ರಯೋಗ ಕಂಡಿತು.
ಗೋಕಾಕದ ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ ಕಂಪನಿಯು ಹನ್ನೇರಡು ವರ್ಷಗಳ ಕಾಲ ಅತ್ಯಂತ ವೈಭವದಿಂದ ಈ ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸಿತು.ಪ್ರತಿ ಊರಲ್ಲೂ ಈ ನಾಟಕ ರಜತೋತ್ಸವ,ಸುವರ್ಣ ಮಹೋತ್ಸವ,ಶತದಿನೋತ್ಸವವನ್ನೂ ಮೀರಿ ಪ್ರದರ್ಶಿತವಾಗುತ್ತಿತ್ತು. ನಾಟಕದ ನಾಯಕ ಕೃಷ್ಣಚಂದ್ರ ಬಳ್ಳಾರಿ ಮತ್ತು ನಾಯಕಿ ಅಂಬುಜಮ್ಮ ಹೊಸಮನಿ ಅವರ ಅಮೋಘ ಅಭಿನಯ ಅಂದಿನ ರಂಗಪ್ರೇಮಿಗಳ ಮನದಲ್ಲಿ ಅಚ್ಚಳಿಯದಂತೆ ಸ್ಥಿರವಾಗಿ ನೆಲೆಗೊಂಡಿತ್ತು. ಈ ನಾಟಕದ ಅಪಾರ ಜನಮನ್ನಣೆ ಅಂದಿನ ಕನ್ನಡ ಚಲನಚಿತ್ರರಂಗದ ಮೇರು ನಟ ರಾಜಕುಮಾರ ಅವರ ಗಮನ ಸೆಳೆಯಿತು.
1973 ರಲ್ಲಿ ಶಾರದಾ ಸಂಗೀತ ನಾಟಕ ಮಂಡಳಿಯು ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಆಡಲಾಗುತ್ತಿತ್ತು. ಅದರ ಜನಪ್ರಿಯತೆಯನ್ನು ಕೇಳಿದ್ದ ಡಾ.ರಾಜಕುಮಾರ ಅವರು ಕನಕಪುರಕ್ಕೆ ಬಂದು ನಾಟಕವನ್ನು ಕಣ್ತುಂಬ ನೋಡಿ ಮೆಚ್ಚಿ ಅದನ್ನು ಸಿನೇಮಾ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಈ ವಿಷಯವನ್ನು ಕಂಪನಿಯ ಮಾಲೀಕ ಬಸವರಾಜಪ್ಪನವರಿಗೆ ಮತ್ತು ನಾಟಕ ರಚನಾಕಾರ ಪಿ.ಬಿ.ಧುತ್ತರಗಿಯವರಿಗೆ ತಿಳಿಸಿ ಅವರನ್ನು ಒಪ್ಪಿಸುತ್ತಾರೆ. 1974 ರಲ್ಲಿ ಚಲನಚಿತ್ರವಾಗಿ ಅದು ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಇತಿಹಾಸ ದಾಖಲಿಸುತ್ತದೆ. ಮುಂದೆ ತೆಲುಗು,ತಮಿಳು,ಹಾಗೂ ಹಿಂದಿ ಭಾಷೆಗಳಲ್ಲಿಯೂ ಚಿತ್ರೀಕರಣಗೊಂಡು ರಜತ ಪರದೆಯ ಮೇಲೆ ಮೆರೆಯುತ್ತದೆ.
ಡಾ.ರಾಜಕುಮಾರ ಅವರು 12.ಎಪ್ರೀಲ್ 2006 ರಲ್ಲಿ ತೀರಿಕೊಂಡಾಗ ನಾವು ಗೆಳೆಯರು ಬಾಗಲಕೋಟೆಯಲ್ಲಿ ಡಾ.ರಾಜ್ ನೆನಪಿಗೆ ಕಾವ್ಯ ನಮನ ಕಾರ್ಯಕ್ರಮವನ್ನು 16 ಎಪ್ರಿಲ್ 2006 ರಲ್ಲಿ ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮಕ್ಕೆ ರಾಜ್ ಒಡನಾಡಿಯಾಗಿದ್ದ ಪಿ.ಬಿ.ಧುತ್ತರಗಿ ಅವರನ್ನು ಕರೆಸಿಕೊಳ್ಳಲು ಯೋಚಿಸಿ ರಂಗಮಿತ್ರ ಎಸ್ಕೆ ಕೊನೆಸಾಗರ ಅವರಲ್ಲಿ ಕೋರಿದೆವು. ಆಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಧುತ್ತರಗಿಯವರು ರಾಜ ನೆನಪಿನ ಕಾರ್ಯಕ್ರಮವೆಂದಾಗ ಬಾಗಲಕೋಟೆಗೆ ಬರಲು ಒಪ್ಪಿಕೊಂಡರು. ಕೊನೆಸಾಗರ ಮತ್ತು ಗೆಳೆಯ ಬಸವರಾಜ ಗವಿಮಠರು ನಮ್ಮ ಕಾರ್ಯಕ್ರಮಕ್ಕೆ ಅತ್ಯಂತ ಜಾಗರೂಕತೆಯಿಂದ ಕರೆದುಕೊಂಡು ಬಂದರು. ಬಾಗಲಕೋಟ ಬಸವೇಶ್ವರ ಡಿ.ಇಡಿ.ಕಾಲೇಜು ಸಭಾಂಗಣದಲ್ಲಿ ಎ,ಎಸ್,ಪಾವಟೆ ಅವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ಜರುಗಿತು. ಆ ಹೊತ್ತಿಗೆ ಧುತ್ತರಗಿಯವರು ಡಾ.ರಾಜ್ ಮತ್ತು ಸಂಪತ್ತಿಗೆ ಸವಾಲು ಸಿನಿಮಾದ ನೆನಪುಗಳನ್ನು ಹಂಚಿಕೊಂಡರು.
ವರನಟ ರಾಜಕುಮಾರ ಅವರು ಸಂಪತ್ತಿಗೆ ಸವಾಲು ಸಿನೇಮಾದಲ್ಲಿ ನಟಿಸುವ ಕಲಾವಿದರಿಗೆ ಗೋಕಾಕ ಕಂಪನಿಯ ನಾಟಕವನ್ನು ನೋಡಿಕೊಂಡು ಬಂದೆ ನಟಿಸಬೇಕೆಂದು ಆಯಾ ಪಾತ್ರಧಾರಿಗಳಿಗೆ ನಿರ್ಬಂಧವಿಧಿಸಿದ್ದರಂತೆ, ಶಾರದಾ ಮಂಡಳಿಯ ಕಲಾವಿದರ ಅಭಿನಯವೆ ಅಷ್ಟೊಂದು ಅತ್ಯದ್ಭುತವಾಗಿತ್ತು.ಅವರು ಚಿತ್ರಕಲಾವಿರು ತಮ್ಮನ್ನು ಅನುಕರಿಸುವಷ್ಟರ ಮಟ್ಟಿಗೆ ನಟನೆಯಲ್ಲಿ ನೈಪುಣ್ಯತೆ ಹೊಂದಿದ್ದರು . ಅದಕ್ಕಾಗಿಯೇ ಡಾ.ರಾಜಕುಮಾರ ಅವರು ಚಿತ್ರನಟರಿಗೆ ಈ ಮಾತನ್ನು ಹೇಳಿದ್ದು.
‘ಡಾ.ರಾಜಕುಮಾರ ಅವರಿಗೆ ರಂಗಭೂಮಿಯ ಮೇಲೆ ಅಪಾರ ಅಭಿಮಾನ,ರಂಗಭೂಮಿಯ ಕಲಾವಿದರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು. ಸಂಪತ್ತಿಗೆ ಸವಾಲು ಎಮ್ಮೆ ಹಾಡು ರಾಜಕುಮಾರ ಅವರ ವೃತ್ತಿ ಬದುಕಿನಲ್ಲಿ ಹೊಸ ತಿರುವು ಕೊಟ್ಟಿತು. ರಾಜ್ ಮರೆಯಲಾಗದ ಕಲಾವಿರಾಗಿದ್ದರು. ಎಂದರು.ಮುಂದೆ ಕೆಲವೇ ತಿಂಗಳುಗಳಲ್ಲಿ 2007 ನವೆಂಬರ್ 1 ರಂದು ಪಿ.ಬಿ.ಧುತ್ತರಗಿಯವರೂ ತೀರಿಕೊಂಡರು. ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ ಡಾ.ರಾಜಕುಮಾರ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ನಮ್ಮ ಕಾರ್ಯಕ್ರಮಕ್ಕೆ ಬಂದು ಧುತ್ತರಗಿಯವರು ಗ್ರೇಟ್ ಎನ್ನಿಸಿಕೊಂಡರು. ಇದೇ ಅಲ್ಲವೇ ‘ಕಲಾವಿದರ ಕುಲಂ ತಾನೊಂದೆ ಒಲಂ’.

Friday 19 April 2013

ಅವಧಿಯಲ್ಲಿ ಲೇಖನ :ಆನಂದ ಕಂದರ ಕಾವ್ಯ


ನಮ್ಮೂರ ನಮಗ ಪಾಡ ,ಯಾತಕವ್ವ ಹುಬ್ಬಳ್ಳಿ ಧಾರ್ವಾಡ
ಡಾ.ಪ್ರಕಾಶ ಗ.ಖಾಡೆ
(ಎಪ್ರೀಲ್ 16 ಆನಂದ ಕಂದ ಕಾವ್ಯನಾಮದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಜನ್ಮ ದಿನ.ಅವರ ನೆನಪಿಗೆ ಈ ಲೇಖನ)
ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರಾಗಿರುವ ಆನಂದಕಂದ ಅವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜತೆಗೆ ಕೆಡಕು ತಾಗದಂತೆ ಮೂಲರೂಪಕ್ಕೆ ಮತ್ತಷ್ಟು ಜೀವ ತುಂಬಿ ಚಿತ್ರಿತವಾಗಿರುವ ಅವರ ಜಾನಪದ ಪ್ರಭಾವಿತ ಕವಿತೆಗಳು ನಾಡವರ ನಾಲಿಗೆಯ ಮೇಲೆ ನಲಿದು ಜನಪ್ರಿಯವಾದವು. ಆನಂದಕಂದರ ಜನಪದ ರೀತಿಯ ಕವಿತೆಗಳು ಜಾನಪದವೇ ಎನ್ನುವಷ್ಟು ಜನಾನುರಾಗಿಯಾಗಿವೆ. ಈ ಜನಪ್ರಿಯತೆಗೆ ಮುಖ್ಯಕಾರಣ ಜಾನಪದದ ಧಾಟಿ ಆದರೂ ಆ ಕಾಲಕ್ಕೆ ಆನಂದ ಕಂದರ ಗೀತೆಗಳನ್ನು ಹಾಡಿ ಖ್ಯಾತಿ ಪಡೆದ ‘ಸಾವಿರ ಹಾಡಿನ ಸರದಾರ’ರೆನಿಸಿದ ಹುಕ್ಕೇರಿ ಬಾಳಪ್ಪನವರೂ ಒಂದು ಕಾರಣ. ಜನಪದ ಹಾಡುಗಾರ ಹುಕ್ಕೇರಿ ಬಾಳಪ್ಪನವರು ಆನಂದಕಂದರ ಹಲವಾರು ಕವನಗಳನ್ನು ಅವಿಸ್ಮರಣೀಯವೆಂಬಂತೆ ರಸಪೂರ್ಣವಾಗಿ ಹಾಡಿ ತೋರಿಸಿದ್ದಾರೆ.
‘ಆನಂದಕಂದ’ ಕಾವ್ಯನಾಮದ ಬೆಟಗೇರಿ ಕೃಷ್ಣಶರ್ಮ ಅವರ ಜಾನಪದ ಆಸಕ್ತಿಗೆ ಮೂಲಕಾರಣ ಅವರು ಬೆಳೆದ ಪರಿಸರ ಮತ್ತು ತಾಯಿಯ ಪ್ರಭಾವ. 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದ ಬೆಟಗೇರಿ ಕೃಷ್ಣಶರ್ಮರು. ಮನೆಯಲ್ಲಿಯ ಹಬ್ಬ-ಹರಿದಿನಗಳ ಆಚರಣೆ, ಪುರಾಣ ಪುಣ್ಯ ಕಥೆಗಳ ಶ್ರವಣ. ಜಾನಪದದ ನಿಕಟ ಸಂಪರ್ಕ ಅವರಿಗೆ ದಕ್ಕಿತು. ಆನಂದಕಂದರು ಕಳೆದ ಶತಮಾನದ ಇಪ್ಪತ್ತನೆಯ ದಶಕವು ಭಾರತವು ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಕಾಲದಲ್ಲಿ ರಾಷ್ಟ್ರೀಯತೆಗೆ ಆಕರ್ಷಿತರಾದರು. ರಾಷ್ಟ್ರೀಯತೆಯ ಜಾಗ್ರತೆಗೆ ಪೋಷಕವಾಗುವ ಅನೇಕ ಹಾಡುಗಳನ್ನು ಈ ಅವದಿsಯಲ್ಲಿ ರಚಿಸಿದರು. ರಾಷ್ಟ್ರೀಯ ಪದ್ಯಾವಲಿ(1921), ಗಾಂದಿsೀ ಗೀತ ಸಪ್ತಕ (1921) ರಾಷ್ಟ್ರೀಯ ಪದ್ಯಮಾಲೆ(1921)ಯ ಹಾಡುಗಳು ಭಾವ ತೀವ್ರತೆ ಮತ್ತು ಗೇಯತೆಯಿಂದೊಡಗೂಡಿ ಜನತೆಯಲ್ಲಿ ದೇಶಾಬಿsಮಾನದ ಪ್ರಜ್ವಲಿಸುವಂತೆ ಮಾಡಿದವು.
ಬೆಟಗೇರಿ ಕೃಷ್ಣಶರ್ಮ ಅವರು ಜಾನಪದ ಕಾರ್ಯವನ್ನು 1929 ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ತ್ರಿಪದಿಗಳನ್ನು ಹಾಡುವುದರೊಂದಿಗೆ ಆರಂಭ ಮಾಡಿದರು. ಅವುಗಳ ಸೊಬಗು ಸೌಂದರ್ಯದ ಜೊತೆಗೆ ಜಾನಪದದ ಶಕ್ತಿ ಸಾಮಥ್ರ್ಯವನ್ನು ಎತ್ತಿ ತೋರಿದರು. ‘ಹಳ್ಳಿಯ ಹಾಡುಗಳು’ ಜಾನಪದವನ್ನು ಹೆಚ್ಚು ಪ್ರಸಿದ್ಧಿಗೆ ತರಲು ಸಹಾಯಕಾರಿಯಾಯಿತು. 1922ರಲ್ಲಿ ಬೆಟಗೇರಿಯವರು ಸಂಗ್ರಹಿಸಿದ ‘ಕೆರೆಗೆ ಹಾರ’ ಜನಪದ ಗೀತೆಯು ಅವರಿಗೆ ಹೆಸರು ಹಾಗೂ ಕೀರ್ತಿ ತಂದಿತು.
‘ಕೆರೆಗೆ ಹಾರ’ ವನ್ನು 1925 ರಿಂದ ತಮ್ಮ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ವಿವರಿಸಿ, ಧಾಟಿ ಹಾಗೂ ಭಾವಪೂರ್ಣವಾಗಿ ಹಾಡಿ ತೋರಿಸುತ್ತಿದ್ದರು. ಈ ಹಾಡು ಕೋಲು ಪದದಲ್ಲಿ ಹೆಣೆದುಕೊಂಡಿದೆ. “ಸವದತ್ತಿ ತಾಲ್ಲೂಕಿನ ಊರಾಗಿರುವ ಯರಗಟ್ಟಿಯ ಹೂಗಾರ ಮನೆತನದ ಹೆಣ್ಣು ಮಗಳನ್ನು ಶ್ರೀ ಕೃಷ್ಣಶರ್ಮರ ಹುಟ್ಟೂರಾದ ಬೆಟಗೇರಿಯಲ್ಲಿರುವ ಹೂಗಾರ ಮನೆತನದ ಕಲ್ಲಯ್ಯ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದರು. ಹಬ್ಬ ಹುಣ್ಣಿವೆಗಳ ರಾತ್ರಿಗಳಲ್ಲಿ ಹೆಣ್ಣು ಮಕ್ಕಳ ಹಾಡುಗಳು ನಡೆಯುತ್ತಿದ್ದವು. ಕೃಷ್ಣಶರ್ಮರು ಗುಂಪಿನಲ್ಲಿ ಕುಳಿತು ಕೇಳಿ ಕಂಠಪಾಠ ಮಾಡಿ ಬರೆದು ಬಳಿಕ ತಮ್ಮ ಮನೆಗೆ ಕರೆಯಿಸಿ ಮತ್ತೆ ಹಾಡಿಸಿ, ಸರಿಯಾಗಿ ನೋಡಿ, ಸಂಗ್ರಹಿಸಿದರು. ಈ ಹಾಡು ಬೆಟಗೇರಿ ಅವರಿಗೆ ಜಾನಪದ ಶೈಲಿಯನ್ನೇ ಕಲಿಸಿತು.” ಎನ್ನುತ್ತಾರೆ ಡಾ.ನಿಂಗಣ್ಣ ಸಣ್ಣಕ್ಕಿಯವರು.
ನಲ್ವಾಡುಗಳು :
ಆನಂದಕಂದರ ‘ನಲ್ವಾಡುಗಳು’ ಆಡುನುಡಿಯ ಸಹಜ ರೂಪಕತೆಯಿಂದ ಕಾವ್ಯವನ್ನು ಸರಳಗೊಳಿಸುತ್ತ ಜನಸಾಮಾನ್ಯರ ನಾಲುಗೆಯ ಮೇಲೂ ನಲಿಯುವಂತೆ ಮಾಡಿವೆ. ‘ನಲ್ವಾಡುಗಳು’ ಸಂಕಲನವು ಇಪ್ಪತ್ತೇರಡು ಪ್ರೀತಿ ಗೀತೆಗಳನ್ನುಜಾನಪದದಲ್ಲಿ ರೂಪಿಸಿದ ಸಂಕಲನ. ಇಲ್ಲಿ ಬೆಟಗೇರಿ ಅವರು ಅಪ್ಪಟ ಜನಪದ ಕವಿಯಂತೆ ಕಾಣುತ್ತಾರೆ. ಶುದ್ದ ಜಾನಪದಕ್ಕೆ ಇವರ ಕವಿತೆಗಳು ಪ್ರಧಾನವಾಗಿ ತೋರುತ್ತವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದದ ವಿವಿಧ ಲಯಗಳೆಲ್ಲವನ್ನೂ ಯಶಸ್ವಿಯಾಗಿ ‘ನಲ್ವಾಡುಗಳು’ ಸಂಕಲನ ಕವಿತೆಗಳಲ್ಲಿ ತಂದಿದ್ದಾರೆ.
ಗೋದಿ ಬೀಜಕ್ಕಂತ ಗೋಕಾಂವಿಗ್ಹೋಗಿದ್ದೆ
ಸಾದಗಪ್ಪಿನ ಸವಿಹೆಣ್ಣ
ಸಾದಗಪ್ಪಿನ ಸವಿಹೆಣ್ಣ ನೋಡುತಲೆ
ಗೋದಿ ಬಿತ್ತಿಗಿಯ ಮರತೆನೊ
ಜನಪದ ತ್ರಿಪದಿಗಳಲ್ಲಿ ಕಂಡು ಬರುವ ಶೈಲಿ, ರೂಪ, ವಸ್ತು ಬೆಟಗೇರಿ ಅವರ ಕವಿತೆಗಳಲ್ಲಿ ಸ್ಥಾನ ಪಡೆದಿವೆ. ‘ನಲ್ವಾಡುಗಳು’ ಸಂಕಲನದ’ ನಮ್ಮೂರ ಜಾತ್ರಿ ಬಲು ಜೋರಾ, ಬೆಣ್ಣಿಯಾಕಿ, ಬುತ್ತಿ ತೂಗೊಂಡು ಹೋಗ್ತಿನಿ ಹೊಲಕ, ಯಾರೋ ಏನೋ ಬರತಾರಂತ, ಹಿಂಗ್ಯಾಕ ನೋಡತಾನ, ಚಿನ್ನತ್ತಿಯ ಮಗ, ಬಡವರ ಮಗಳು, ಗೌಡರ ಮನೆ ಸೊಸಿ, ಗೆಣತಿ, ಏನ ಮಾಡ ಅಂತೀ, ಬೆಳವಲ ಒಕ್ಕಲತಿ ಮೊದಲಾದ ಕವಿತೆಗಳು ಹೆಸರೇ ಸೂಚಿಸುವಂತೆ ಜನಪದ ಸಂಸ್ಕøತಿಗೆ ಸೇರಿದ್ದು, ಅಲ್ಲಿನ ವಸ್ತು, ಲಯ, ಸೊಗಸು ಸೌಂದರ್ಯಗಳನ್ನು ಪಡೆದುಕೊಂಡಿದೆ ಎನ್ನುವುದಕ್ಕಿಂತ ಜಾನಪದವೇ ಆಗಿದೆ ಎಂದು ಗುರುತಿಸಲು ಸಾಧ್ಯ. ‘ನಮ್ಮ ಹಳ್ಳಿಯೂರs ನಮಗ ಪಾಡs ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ’ ಎಂಬ ಆನಂದಕಂದ ಜನಪ್ರಿಯ ಈ ಗೀತೆ ಅವರ ಒಟ್ಟು ಕಾವ್ಯ ಧೋರಣೆಯನ್ನು ಪ್ರಕಟಿಸುತ್ತದೆ.
ಊರ ಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳs ನೆಳ್ಳs
ನೀರ ತರುವಾಗ ಗೆಣತ್ಯಾರ ಜೋಡs
ಯಾತಕವ್ವಾ ಹುಬ್ಬಳ್ಳಿ – ಧಾರ್ವಾಡs
ಆಧುನಿಕತೆಯ ಸೋಗಿನಲ್ಲಿ ವಾಸ್ತವದ ಬದುಕು ಅನುಭವಿಸುವ ವಂಚಿತ ಸಮುದಾಯದ ನೋವು ನಿರಾಸೆಗಳನ್ನು ಈ ಮೂಲಕ ಅಬಿsವ್ಯಕ್ತಪಡಿಸುವ ಕವಿ ಗ್ರಾಮ ಸಂಸ್ಕøತಿಯ ತಾಜಾತನ, ಅದರ ಸಹಜತೆಗೆ ಮಾರುಹೋಗಿ ಅದರಲ್ಲಿ ಬದುಕಿನ ಅಂತಿಮ ಸಾರ್ಥಕತೆಯನ್ನು ಪ್ರಕಟಿಸಿದ್ದಾರೆ. ಬೇಂದ್ರೆ, ಕುವೆಂಪು ಅವರಂತೆ ಭಾಷೆಯನ್ನು ಹೇಗೆ ಬೇಕೊ ಹಾಗೆ ಹಿಂಜುವುದಕ್ಕೆ, ಹಿಂಡುವುದಕ್ಕೆ ಬೆಟಗೇರಿಯವರು ಹೋಗಿಲ್ಲ. ಭಾವವನ್ನು ಸ್ಪಷ್ಟಪಡಿಸುವ ಶಕ್ತಿಯನ್ನು ಬೆಟಗೇರಿಯವರ ಭಾಷೆ ಜಾನಪದದಿಂದ ಪಡೆದಿದೆ. ಸಂಭಾಷಣೆಯ ರೀತಿಯೂ ಜನಪದರ ಮಾತಿನ ಯಥಾವತ್ತ ರೂಪವಾಗಿದೆ. ಚೆಲುವೆ ಹೆಣ್ಣನ್ನು ಒಲಿದು ತಂದ ಅಣ್ಣನಿಗೆ ತಂಗಿ ಕೇಳುವ ಮಾತು ಗಮನಿಸಿ,
“ಹೇಳು ಹ್ಯಾಂಗಿವಳು ನಿನ್ನ ಮೆಚ್ಚಿದಳು
ಮಾಟ ಮಾಡಿದೇನೋ”
‘ಎಲ್ಲಿಂದೀಕೀನ ಕರೆತಂದೆಣ್ಣಾ ಯಾರು ಹೇಳು ಈಕಿ’ ಎಂಬ ಮಾತಿನಲ್ಲಿ ಸಹಜತೆ ಇದೆ. ಜನಪದರ ಆಡುನುಡಿಯಲ್ಲಿ ಬಳಕೆಯಾಗುವ ಪಡೆನುಡಿ, ಗಾದೆ, ನಾಣ್ನುಡಿಗಳ ರೂಪಗಳು ಆನಂದಕಂದರ ಕಾವ್ಯದಲ್ಲಿಯೂ ಬೇಂದ್ರೆಯವರ ಕಾವ್ಯದಂತೆ ತುಂಬಿಕೊಂಡಿವೆ.
ಉಟ್ಟಾಳು ಹಸಿರು ಪತ್ತಲಾ
ಪತ್ತಲಲ್ಲ ಹೂವಿನ್ಹಿತ್ತಲಾ
( ನಾಜೂಕದ ನಾರಿ)
‘ಮುಂಗುರುಳು ಹಾರ್ಯಾಡುವ ಹಣಿ
ಚೆಲ್ವಿಕೆಯ ಖಣೀ’
(ಬೆಣ್ಣಿಯಾಕಿ)
ಹೀಗೆ ಅನೇಕ ರೂಪಗಳು ಮಾತಿನ ಮೋಡಿಯಿಂದ ಜಾನಪದರ ಶಕ್ತಿ ಸೌಂದರ್ಯ, ಮಾತಿನ ಶೈಲಿ ಸಿದ್ದಿ ಬೆಟಗೇರಿಯವರ ಕಾವ್ಯದಲ್ಲಿ ಸಮೃದ್ಧಗೊಂಡಿವೆ.
‘ನಾ ಸಂತಿಗೆ ಹೋಗಿನ್ನಿ – ಆಕಿ ತಂದಿದ್ದಾಳೋ ಬೆಣ್ಣಿ;
ಹಿಂಡು ಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ
(ಬೆಣ್ಣಿಯಾಕಿ)
‘ಹೆಜ್ಜೆ ಹೆಜ್ಜೆಗೂ ಘಿಲಿಘಿಲಿ, ಘಿಲಿಘಿಲಿ ಗೆಜ್ಜಿಯ ಕುಣಿಸುತ ಬರುವಾಕಿ’
(ಗೌಡರ ಮನಿಸೊಸಿ),
ಬುತ್ತೀ ತೊಗೊಂಡು ಹೋಗ್ತಿನಿ ಹೊಲಕ
ನಾ ಬರ್ತೀನಿ ಹೊತ್ತು ಮುಣುಗುದಕ
ಹೊಳಿ ದಂಡೀ ಮ್ಯಾಗ ನಮ್ಮ ಹೊಲಾ
ಬೆಳೆದು ನಿಂತೈತಿ ಬಿಳಿ ಜೋಳ ನಿಲಾ
(ಬೆಳವಲ ಒಕ್ಕಲತಿ)
ಹೀಗೆ ಜನಪದ ಜೀವನದ ವೈವಿಧ್ಯಮಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಆನಂದಕಂದರು ‘ನಲ್ವಾಡುಗಳು’ ಸಂಕಲನದ ಕವಿತೆಗಳಲ್ಲಿ ಕಂಡರಿಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ಬೆಳಗಾವಿ-ಧಾರವಾಡ-ವಿಜಾಪುರ ಭಾಗದ ಕನ್ನಡ ಭಾಷಾ ಪ್ರಭೇಧವನ್ನು ತಮ್ಮ ಕವಿತೆಗಳಲ್ಲಿ ಬಳಸಿಕೊಂಡಿದ್ದಾರೆ. ಸತ್ವಪೂರ್ಣ ಜಾನಪದೀಯ ಭಾಷೆ ಇಲ್ಲಿದೆ. ಒಟ್ಟಿನಲ್ಲಿ ‘ಆನಂದಕಂದ’ರ ಕವಿತೆಗಳು ಕನ್ನಡ ನವೋದಯ ಕಾವ್ಯ ಸಂದರ್ಭದಲ್ಲಿ ಜಾನಪದವನ್ನು ಅದರ ಮೂಲತನದಿಂದಲೇ ಎತ್ತಿಕೊಂಡಷ್ಟು ಪ್ರಭಾವಕ್ಕೆ ಒಳಗಾಗಿವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದರ ವಿವಿಧ ಲಯಗಳೆಲ್ಲವನ್ನು ಹಾಗೂ ಅವರ ಬದುಕಿನ ಕ್ರಮವನ್ನು ಅವರ ಕವಿತೆಗಳು ಯಶಸ್ವಿಯಾಗಿ ತನ್ನದಾಗಿಸಿಕೊಂಡಿವೆ. ಬೇಂದ್ರೆ, ಮಧುರಚೆನ್ನರಂತೆ ಜಾನಪದದ ಮಹತ್ವಪೂರ್ಣ ಸಾಧಕರಾಗಿ ಬೆಟಗೇರಿ ಕೃಷ್ಣಶರ್ಮರು ನವೋದಯ ಕಾವ್ಯದ ಸಂದರ್ಭದಲ್ಲಿ ಎದ್ದು ಕಾಣುತ್ತಾರೆ.

 

ಆನಂದ ಕಂದರ ಕಾವ್ಯಾವಲೋಕನ « ಅವಧಿ / avadhi

ಆನಂದ ಕಂದರ ಕಾವ್ಯಾವಲೋಕನ « ಅವಧಿ / avadhi

Thursday 18 April 2013


                                                       ಕನ್ನಡ ಹರಿದಾಸ ಕಾವ್ಯ ಪರಂಪರೆ
                                                          - ಡಾ.ಪ್ರಕಾಶ ಗ.ಖಾಡೆ , ಬಾಗಲಕೋಟ

       ಕಳೆದ ಹದಿನೇಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗಿನ ಕಾಲದಲ್ಲಿ ಉತ್ತರ ಕರ್ನಾಟಕ ಮತ್ತು ಹೈದಾರಾಬಾದ್ ಕರ್ನಾಟಕ ಭಾಗದಲ್ಲಿ ಮೂಡಿಬಂದ ಸ್ಥಳೀಯ ಕಾವ್ಯ ಸಂದರ್ಭಗಳನ್ನು ಪರಿಗಣಿಸಿ ನೋಡಿದಾಗ ಅದೊಂದು ‘ದೇಸೀ ಸಾಹಿತ್ಯದ ಸುವರ್ಣಯುಗ’ ಎಂದು ಕರೆಸಿಕೊಳ್ಳುವುದು ಖಚಿತವಾಗುತ್ತದೆ. ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ವಿಜಯನಗರದ ಪತನದ ಅನಂತರ ಕನ್ನಡ ಸಾಹಿತ್ಯ ಅe್ಞÁತವಾಸಕ್ಕೆ ಹೋಯಿತೆಂದು ಬಹುತೇಕ ಚರಿತ್ರೆಕಾರರು ಹೇಳಿದ್ದಾರೆ. ಈ ದಿನಗಳಲ್ಲಿ ಇಂದಿನ ಕರ್ನಾಟಕದಲ್ಲಿಯ ಬಹುತೇಕ ಪ್ರದೇಶಗಳು ವಿಜಾಪುರದ ಆದಿಲ್‍ಶಾಹಿಯ ರಾಜ್ಯಕ್ಕೆ ಒಳಪಟ್ಟಿದ್ದವು. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆಕಾರರ ಊಹೆಯೂ ವಾಸ್ತವವಾಗಿತ್ತು, ಆದರೆ ವಸ್ತುಸ್ಥಿತಿ ಹಾಗಿರಲಿಲ್ಲ.ಕವಿ ರನ್ನ, ನಾಗಚಂದ್ರ, ಕುಮಾರ ವಾಲ್ಮೀಕಿ, ಬಸವಣ್ಣನವರನ್ನು ಕನ್ನಡಕ್ಕೆ ಕೊಟ್ಟ ಆದಿಲ್‍ಶಾಹಿ ಪ್ರಭುತ್ವಕ್ಕೊಳಗಾದ ವಿಜಾಪುರ ರಾಜ್ಯ ಈ ಕಾಲದಲ್ಲಿ ಹಲವು ಭಾಷೆಗಳ ಸಂಗಮವಾಗಿ ‘ಕನ್ನಡ’ವನ್ನು ಹುಡುಕುವಂತಾಯಿತು. ಆಳರಸರು ತಂದ ಪರ್ಶಿಯನ್ ಭಾಷೆ, ಸೈನ್ಯದಲ್ಲಿ ಬಳಕೆಯಾಗಿ ಅಬಿsವೃದ್ಧಿ ಹೊಂದಿದ ಉರ್ದು ಭಾಷೆ, ಮರಾಠಿಗರ ಶರೀರ ಸಂಬಂಧದಿಂದ ಬೆಳೆದು ಬಂದ ಮರಾಠಿ ಭಾಷೆ, ಇವೆಲ್ಲ ಭಾಷೆಗಳ ಮಿಶ್ರಣದಿಂದ ಹುಟ್ಟಿದ ಹೊಸ ಭಾಷೆ ಧಖಣಿ. ಇವೆಲ್ಲ ಕನ್ನಡವನ್ನು ಒಂದೆಡೆ ಪರಕೀಯಗೊಳಿಸಿದವು ಎನ್ನುವುದಾದರೆ ಮತ್ತೊಂದೆಡೆ ಈ ಭಾಷೆಗಳ ಕೊಳುಕೊಡುಗೆಗಳ ಸಮೃದ್ಧತೆ ಸಾಧ್ಯವಾಯಿತೆನ್ನಬಹುದು. ಈ ಸಾಧ್ಯತೆಯನ್ನು ದುಡಿಸಿಕೊಂಡ ಹರಿದಾಸರು, ಲಾವಣಿಕಾರರು, ತತ್ತ್ವಪದಕಾರರು ಕನ್ನಡವನ್ನು ಮುಕ್ಕಾಗದಂತೆ ಉಳಿಸಿಕೊಂಡು ಬಂದಿರುವುದು ಬಹುದೊಡ್ಡ ಸಾಧನೆಯಾಗಿದೆ. ಈ ಕಾಲದ ಕನ್ನಡ ಭಾಷೆಯ ಸಾಹಿತ್ಯ ಕೃತಿಗಳಲ್ಲಿಯ ಒಂದು ವೈಚಿತ್ರ್ಯವೆಂದರೆ, ಮಿಶ್ರ ಭಾಷಾ ಕೃತಿ ರಚನೆ. ಕಾಖಂಡಕಿ ಮಹಿಪತಿರಾಯರ ‘ಬಾಟ ಪಕಡೋ ಸೀದಾ’ ಎಂಬ ಕೃತಿಯಲ್ಲಿ ಮೂರು ಭಾಷೆಗಳಿದ್ದರೆ, ಅವರದೇ ಆದ ಇನ್ನೊಂದು ಕೃತಿಯಲ್ಲಿ ನಾಲ್ಕು ಭಾಷೆಗಳ ಮಿಶ್ರಣವಿದೆ.
ಸಮಜೋ ಭಾಯಿ ಸಕುನಾ ಚಾರೋ ಖುದಾಕಾ
ತೆಲುಗು ಕನ್ನಡ ತುರುಕಾರೆ ವಂದೇ ಸುಖ |
ಎಂಬ ಈ ಪದದಲ್ಲಿ ಮರಾಠಿ ಭಾಷೆಯ ಪ್ರಯೋಗವನ್ನು ಮಾಡಿದ್ದರೂ ಅದರ ಹೆಸರನ್ನು ಹೇಳದಿದ್ದದು ಗಮನಾರ್ಹವಾಗಿದೆ.
ದೇಖೊ ಭಾಯಿ ದಿಸತಾ ತುಮನಾ ನಜರೋಮೆ ನಜರೋ
ತನ್ನೊಳಗೆ ಅತಿ ಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆ |
ಸದ್ಗುರು ವಚನ ಶೋಧುನಿ ಪಾಹಾ ಸಪ್ರೇಮ ಸಪ್ರೇಮ
ಚುಡವಯ್ಯ ಉನ್ನಾದಿ ಪೂರ್ಣ ಘನ ಮಹಿಮೆ |
ರಾಜಕೀಯ ಸ್ಥಿತ್ಯಂತರಗಳಿಂದ ಭಾಷಿಕ ಸೌಲಭ್ಯಗಳು ಹುಟ್ಟು ಹಾಕಿದ ಇಂಥ ರಚನೆಗಳು ಆ ಕಾಲದ ಕನ್ನಡ ಸಂದರ್ಭಕ್ಕೆ ಉಂಟುಮಾಡಿದ ಸಂಘರ್ಷಗಳನ್ನು ಅರಿಯಬೇಕಾಗಿದೆ. ಸಿಂದಗಿಯ ಜಕ್ಕಪ್ಪಯ್ಯನವರಿಂದ ರಚಿತವಾದ ‘ಅಗ್ನಿ ಪರೀಕ್ಷೆ’ ಎಂಬ ಖಂಡಕಾವ್ಯವು ಕನ್ನಡ ಮರಾಠಿ ಭಾಷೆಯಲ್ಲಿ ಬರೆಯಲಾಗಿದೆ. ಒಂದು ಕೃತಿಯನ್ನು ಹೀಗೆ ದ್ವಿಭಾಷೆಯಲ್ಲಿ ರಚಿಸಿದ ಉದಾಹರಣೆಗಳು ಸಾಹಿತ್ಯ ಚರಿತ್ರೆಯಲ್ಲಿ ಸಿಕ್ಕುವುದು ಅಪರೂಪವೆಂದೇ ಹೇಳಬೇಕು. “ಇದು ಕೇವಲ ಕನ್ನಡ ಕೃತಿಕಾರರಿಗಷ್ಟೇ ಸೀಮಿತವಾಗಿದೆವೆಂಬುದು ಮಹತ್ವದ ಸಂಗತಿಯಾಗಿರದೆ, ಮುಸ್ಲಿಮರೂ ತಮ್ಮ ಕೃತಿಗಳಲ್ಲಿ ಸಂಸ್ಕøತ ಮರಾಠಿ ತೆಲುಗು ಭಾಷೆಗಳ ಪದಗಳನ್ನು ಧಾರಾಳವಾಗಿ ಬಳಸಿದ ನಿದರ್ಶನಗಳು ದೊರೆಯುತ್ತವೆ. ವಿಶೇಷತಃ ಕನ್ನಡದ ಜನಪದ ಕೃತಿಗಳಾದ ಬೀಸುವ ಕಲ್ಲಿನ ಪದ, ಸೋಬಾನೆ ಪದ, ಕುಟ್ಟುವ ಪದಗಳು ‘ಚಕ್ಕೀನಾಮಾ’, ಸುಹಾಗನಾಮಾ ಎಂಬಿತ್ಯಾದಿಯಾಗಿ ದಖಣಿಯಲ್ಲಿ ಉರ್ದುವಿನಲ್ಲಿ ನೇರವಾಗಿ ಅನುವಾದಗೊಂಡ ಉದಾಹರಣೆಗಳು ವಿಜಾಪುರದ ಸುತ್ತಮುತ್ತಲಿನ ಮುಸ್ಲಿಂ ಕುಟುಂಬಗಳಲ್ಲಿ ಇಂದಿಗೂ ದೊರೆಯುತ್ತವೆ ಎನ್ನುತ್ತಾರೆ ಕನ್ನಡದ ಹಿರಿಯ ವಿದ್ವಾಂಸರಾದ ಡಾ,ಕೃಷ್ಣ ಕೋಲ್ಹಾರ ಕುಲಕರ್ಣಿಯವರು.
ಈ ಕೊಳ್-ಕೊಡುಗೆ ಈ ಪ್ರದೇಶದಲ್ಲಿ ಒಂದು ಸಾಂಸ್ಕøತಿಕ ಬದುಕನ್ನೂ ರೂಪಿಸಿದ್ದು ಮುಖ್ಯವಾಗುತ್ತದೆ. ಈ ಕಾಲದ ದಾನ ಪರಂಪರೆಯಲ್ಲಿ ವಿಜಾಪುರದ ರುಕ್ಮಾಂಗದ ಪಂಡಿತರ ಸಾಧನೆ ಗಮನಾರ್ಹವಾದುದು. ವಿಜಯನಗರ ಪತನದಲ್ಲಿ ನಂದಿ ಹೋದ ಕನ್ನಡ ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸಿದರು. ಹಂಪಿಯ ನೌರಾನಂದಯತಿಗಳಿಂದಲೇ ಪ್ರಭಾವಿತರಾದ ಅವರು ದಾಸ ಸಾಹಿತ್ಯ, ಕೀರ್ತನ ಪರಂಪರೆ ಮುಂದುವರೆಸಿದರು. ಸಿಂದಗಿಯ ಬಿsೀಮಾಶಂಕರರು ಹಾಗೂ ಅವರ ಮಕ್ಕಳಾದ ಜಕ್ಕಪ್ಪಯ್ಯ ಮತ್ತು ಶಿವರಾಮ ಪಂಥರು ಕನ್ನಡ ಭಾಷೆಯಲ್ಲಿ ಅನೇಕ ಪದ್ಯಗಳನ್ನು ರಚಿಸಿದ್ದಾರೆ. ವಿಶೇಷವಾಗಿ, ಆಧ್ಯಾತ್ಮಿಕ ಅನುಭವಗಳನ್ನು ಹೇಳಿದ ಪದಗಳು ಅಪರೂಪದ್ದಾಗಿವೆ. ಸಾಹಿತ್ಯ ದೃಷ್ಟಿಯಿಂದ ‘ಶಂಕರ’ ಅಂಕಿತದಲ್ಲಿ ಜಕಪ್ಪಯ್ಯ ಬರೆದ ‘ದತ್ತಾತ್ರೇಯ ಷಟ್ಪದಿ’ 75 ಷಟ್ಪದಿಗಳ ಖಂಡಕಾವ್ಯ ಗಮನಾರ್ಹವಾಗಿದೆ. ದತ್ತ ಸಾಹಿತ್ಯವನ್ನು ಪ್ರಥಮವಾಗಿ ಕನ್ನಡದಲ್ಲಿ ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
       ಗಲಗಲಿ ಅವ್ವ ಹಾಗೂ ಅವರ ಶಿಷ್ಯೆ ಪ್ರಿಯಾಗಬಾಯಿ ಅವರು ಸಂಸ್ಕøತ ಘನ ಪಂಡಿತರ ಮನೆತನದಲ್ಲಿ ಹುಟ್ಟಿ ಬೆಳೆದವರು. ಕನ್ನಡ ಭಾಷೆಯಲ್ಲಿ ಪಾಮರರಿಗೂ ತಿಳಿಯುವಂತೆ ಭಕ್ತಿ ಪರವಾದ ಗೀತೆಗಳನ್ನು ಬರೆದರು. ಗಲಗಲಿ ಅವ್ವನವರಿಗೆ ತರ್ಕ, ನ್ಯಾಯಶಾಸ್ತ್ರಗಳಲ್ಲಿಯೂ ಪಾಂಡಿತ್ಯವಿದ್ದಿತು. ಅವರು ಮುಯ್ಯದ ಹಾಡು, ಶೃಂಗಾರ ತಾರತಮ್ಯ, ಮೋರೆಗೆ ನೀರು ತರುವ ಹಾಡು ಮೊದಲಾದ ಆಧ್ಯಾತ್ಮಪರವಾದ ಗೀತ ಕಾವ್ಯಗಳನ್ನು ಬರೆದಿದ್ದಾರೆ. ಶ್ರೀ ರಾಮೇಶ ಅಂಕಿತದಲ್ಲಿ ಅವರು ಬರೆದರು.
ಭಾವಜ್ಞರ ಸಂಗ ಶಾವೀಗಿ ಉಂಡಂತೆ
ಭಾವವರಿಯದಾ ಪಾಮರರ
ಭಾವವರಿಯದಾ ಪಾಮರರ | ಸಹವಾಸ
ಬೇವಿನ ಹಾಲು ಕುಡಿದಂತೆ.
ಎಂಬಲ್ಲಿ ಗಲಗಲಿ ಅವ್ವನವರು ಆ ಕಾಲಕ್ಕೆ ಬಳಕೆಯಲ್ಲಿದ್ದ ತ್ರಿಪದಿ ಮಟ್ಟುಗಳನ್ನು ಬಳಸಿಕೊಂಡು ಈ ಬಗೆಯ ರಚನೆ ನೀಡಿದರು. ಪ್ರಯಾಗಬಾಯಿಯವರು ಕ್ಲಿಷ್ಟಕರವಾದ ಭಾಗವತ ಅದರಲ್ಲೂ ತತ್ವಗಳಿಂದ ಕೂಡಿದ ತೃತೀಯ ಸ್ಕಂದವನ್ನು ಸರಳಗನ್ನಡದಲ್ಲಿ ಅನುವಾದ ಮಾಡಿದರು. ಈ ಪರಂಪರೆಯಲ್ಲಿ ಮಹಿಪತಿರಾಯರ ಮಗ ಕೃಷ್ಣದಾಸರು ಸಾವಿರಾರು ಕೀರ್ತನೆಗಳಲ್ಲದೆ ‘ಭಾವಾರ್ಥ ರಾಮಾಯಣ’, ಪ್ರಲ್ಹಾದ ಚರಿತ್ರೆ, ಶ್ರವಣಕುಮಾರ ಚರಿತ್ರೆ, ವಾಮನ ಚರಿತ್ರೆ, ಕಾಳಿಯಾನಂದ ಚರಿತ್ರೆ, ಸುದಾಮ ಚರಿತ್ರೆ, ಗಜೇಂದ್ರ ಮೋಕ್ಷ ಆಖ್ಯಾನಗಳು, ‘ಆನಂದ ಲಹರಿ’ ಎಂಬ ಖಂಡಕಾವ್ಯ ಮೊದಲಾದ ಕೃತಿಗಳನ್ನು ರಚಿಸಿದರು. ಕೃಷ್ಣದಾಸರ ‘ಆನಂದಲಹರಿ’ ಜನಪದ ಸ್ವರೂಪ ಹೊಂದಿದ ಕೃತಿ, ಮುಯ್ಯುದ ಹಾಡುಗಳು ಇಲ್ಲಿವೆ. ಮದುವೆ ಸಮಾರಂಭದಲ್ಲಿ ಬೀಗರು ಒಬ್ಬರಿಗೊಬ್ಬರು ಮುಯ್ಯ ತರುವುದು(ಕಾಣಿಕೆ), ಒಬ್ಬರನ್ನೊಬ್ಬರು ಹಾಸ್ಯ ಮಾಡುವುದು ಒಂದು ಸಂಪ್ರದಾಯ. ಅದೊಂದು ರಸ ಪ್ರಸಂಗ. ಈ ಹಿನ್ನೆಲೆಯಲ್ಲಿ ಒಂದು ಸಾಂಕೇತಿಕ ರೂಪಕವನ್ನು ಕಲ್ಪಿಸಿ ಶ್ರೀ ಕೃಷ್ಣದಾಸರು ವಿವೇಕ ಮತ್ತು ಬೋದಿs ಎಂಬ ಅಕ್ಕ ತಂಗಿಯರು ‘ಅಬಿsಮಾನಿ’ ಸೋದರ ಮಾವ. ‘ವಿಷಮೆ’ ಅತ್ತೆ ಇವರಲ್ಲಿಗೆ ಮುಯ್ಯು ತರುವಂತೆ ಆರಂಬಿsಸಿ ಪರಮಾರ್ಥ ಸಾಧನೆಗೆ ಅವಶ್ಯವಿದ್ದುದನ್ನೆಲ್ಲಾ ಇದರಲ್ಲಿ ಹೇಳಿದ್ದಾರೆ.

              ಹರಿದಾಸ ಸಾಹಿತ್ಯವು 12ನೆಯ ಶತಮಾನದಲ್ಲಿಯೇ ಆರಂಭವಾಗಿ 15-16ನೆಯ ಶತಮಾನದಲ್ಲಿ ಅತ್ಯಂತ ಉನ್ನತ ಸ್ಥಿತಿಯನ್ನು ಹೊಂದಿ ಮುಂದೆ 17ನೆಯ ಶತಮಾನದಲ್ಲಿ ನವ ಚೈತನ್ಯದಿಂದ ವಿಸ್ತಾರಗೊಂಡಿತು. ಕನ್ನಡ ಹರಿದಾಸ ಪರಂಪರೆಯನ್ನು ವಿಜಯನಗರ ಕಾಲದವರೆಗಿನ ಬೆಳೆದು ಬಂದ ದಾಸ ಸಾಹಿತ್ಯ, ವಿಜನಯಗರ ಪತನದ ಅನಂತರ ಬೆಳೆದು ಬಂದ ದಾಸ ಸಾಹಿತ್ಯವೆಂದು ಪ್ರೋ.ವಸಂತ ಕುಷ್ಟಗಿ ಅವರು ವಿಂಗಡಿಸಿದ್ದಾರೆ. ಪರಕೀಯ ದಾಳಿ, ಸ್ಥಳೀಯತೆಯ ನಾಶ, ಅನ್ಯ ಸಂಸ್ಕøತಿಯ ಹೇರಿಕೆ ಒತ್ತಡಗಳ ನಡುವೆ ನೆಮ್ಮದಿ ಕಳಕೊಂಡ ಸಾಮಾನ್ಯ ಜನರ ಬದುಕಿನಲ್ಲಿ ಆಶಾಕಿರಣವಾಗಿ ಬೆಳಕು ನೀಡಿ ಅವರ ಬದುಕು  ಹಸನುಗೊಳಿಸಿದ ಕೀರ್ತಿ ದಾಸ ಪರಂಪರೆಯ ಕೀರ್ತನಕಾರರಿಗೆ ಸಲ್ಲುತ್ತದೆ. ವಿಸ್ಮೃತಿಗೆ ಒಳಪಟ್ಟ ಕಾಲದಲ್ಲಿ ಕಾವ್ಯ ಕಟ್ಟಿ ಮೆರೆದ ದಾಸರ ಪರಂಪರೆಯ ನಮ್ಮ ರಚನಾಕಾರರ ಸಾಧನೆ ಅಪೂರ್ವವಾದುದು. ಹರಿದಾಸ ಸಾಹಿತ್ಯದ ಮೊದಲನೆಯ ಘಟ್ಟದಲ್ಲಿ ಪುರಂದರದಾಸರು ಕೇಂದ್ರಬಿಂದುವಾಗಿದ್ದಂತೆ ಎರಡನೆಯ ಘಟ್ಟದಲ್ಲಿ ವಿಜಯದಾಸರು ಕೇಂದ್ರಬಿಂದುವಾಗಿ ಅವರ ನೇತೃತ್ವದಲ್ಲಿ ಅನೇಕ ಹರಿದಾಸರು ದಾಸಕೂಟ ಪದ್ಧತಿಯನ್ನು ಮುಂದುವರೆಸಿದರು. ಅದರಿಂದ ‘ಅಸಾರತೆಯ ಕಾಲದಲ್ಲೂ’ ದಾಸ ಸಾಹಿತ್ಯವು ಚೇತೋಹಾರಿಯಾಗಿ ಬೆಳೆದು ಎಲ್ಲಿ ನೋಡಿದರಲ್ಲಿ ಹಸುರು ಕುಡಿಯೊಡೆದು ಬೆಳೆಯಿತು. ಇವರು ತಮ್ಮ ಒಂದು ಶಿಷ್ಯರ ದೊಡ್ಡ ಬಳಗವನ್ನೇ ಕಟ್ಟಿದರು. ಆ ಬಳಗದಲ್ಲಿ ಭಾಗಣ್ಣ ದಾಸರು, ಆನಂದ ದಾಸರು, ಶೀನಪ್ಪ ದಾಸರು, ರಾಮದಾಸರು, ಪಂಗನಾಮ ತಿಮ್ಮಣ್ಣದಾಸರು, ಕೊಂಡಲಿ ಮಧ್ವಾಚಾರ್ಯರು, ಮೋಹನದಾಸರು, ಮೊದಲಕಲ್  ಶೇಷಗಿರಿದಾಸರು ಹಾಗೂ ಶೇಷಗಿರಿದಾಸರು ಮೊದಲಾದವರು ಬರುತ್ತಾರೆ. ಇವರಲ್ಲಿಯೇ ಅನೇಕರು ತಮ್ಮ ಶಿಷ್ಯ ಪರಂಪರೆಯನ್ನು ಬೆಳೆಸಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
                                                                       ಪುರಂದರ ದಾಸರು
ವಿಜಯದಾಸರು (1687-1755) ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಚೀಕಲಪರವಿ ಗ್ರಾಮದವರು. ತಮ್ಮ ‘ವಿಜಯ ವಿಠ್ಠಲ’ ಅಂಕಿತದಿಂದ ವಿಚಾರಪೂರ್ಣ, ಆಲೋಚನಾ ಪರವಾದ ಪಾಂಡಿತ್ಯಪೂರ್ಣ ಕಾವ್ಯ ರಚಿಸಿ ಹಾಡಿದರು. ‘ಮಾನ ನಿನ್ನದು, ಅಬಿsಮಾನ ನಿನ್ನದು ದಾನವಾಂತಕ ರಂಗ ದಯಮಾಡಿ ಸಲಹೋ....’ ಎಂದು ಮೊರೆಯಿಟ್ಟ ಅವರು ‘ಅಂತರಂಗದ ಕದವು ತೆರೆಯಿತಿಂದು; ಎಂಥ ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ’ ಎಂದು ತನ್ಮಯರಾಗಿ ಹಾಡಿದರು.
                                                                        ವಿಜಯದಾಸರು
ವಿಜಯದಾಸರಿಗೆ ಸಮಕಾಲೀನರಾಗಿದ್ದ ಬಾಗಲಕೋಟೆಯ ಪ್ರಸನ್ನ ವೆಂಕಟದಾಸರು ಉತ್ತರ ಕರ್ನಾಟಕದ ಭಾಷಾ ವೈಖರಿಯಲ್ಲಿ ಜಾನಪದ ಶೈಲಿಯನ್ನು ಬಳಸಿಕೊಂಡು ಕೃತಿ ರಚಿಸಿದರು. ಇವರ ಸಾಹಿತ್ಯವು ‘ಕಾಕಂಬಿ’ ಸವಿಯಿಂದ ಕೂಡಿದೆಯೆಂದು ಅವರ ಸಮಕಾಲೀನ ದಾಸರು ಮೆಚ್ಚಿಕೊಂಡಿದ್ದಾರೆ. ಇವರು ಬದುಕಿದ್ದ ಕಾಲ ರಾಜಕ್ರಾಂತಿಯ ಕಾಲ. ಆ ಕ್ರಾಂತಿಯ ಭಾಷೆಯ ಸತ್ತ್ವವನ್ನು ಆರಿತು ಸಾಂಸ್ಕøತಿಕ ದುರಂತವನ್ನು ನಿವಾರಿಸಲು ತಮ್ಮ ಸಾಹಿತ್ಯದಲ್ಲಿ ಆ ಸತ್ವವನ್ನು ಬಳಿಸಿದ್ದಾರೆ. ಇದರಿಂದ ಹೊಸ ಮೆರಗು ದಾಸ ಸಾಹಿತ್ಯದ ಪ್ರವಾಹಕ್ಕೆ ಬಂದಿದೆ.
‘ಯಶೋದೆಯಮ್ಮಾ ನಂಗನ್ನೆತ್ತಿಕೊ ಅಮ್ಮಾ... ವತ್ತಿ ಬಲು ಅತ್ತು ಬಂದೀನೆ ನಾ ಇತ್ತೇ ಅಮ್ಮಿತಿಂದೆನೇ ಹೊಟ್ಟೆ ಹಸ್ತು....ತುತಿ ಬಾಯಿ ದಂಗ್ಯಾವೆ ಬಿಚಿವಾವು ವಾಕತ್ತಿ ಬತ್ತಾವೆ.... ಅತ್ತಿದಾವು ಪಪ್ಪುಕಾಯಿ ಅಮ್ಮಮ ಮ್ಮೊಲ್ಲೆ ಉತ್ತತ್ತಿ’ ....ಹೀಗೆ  ಬಾಗಲಕೋಟೆ ಪರಿಸರದ ಗ್ರಾಮ್ಯ ಭಾಷೆಯನ್ನು ಜನಪದರ ಬಾಯಿಂದಲೇ ನೇರ ಎತ್ತಿಕೊಂಡು ಬರದಂತೆ ಪ್ರಸನ್ನ ವೆಂಕಟದಾಸರು ತಮ್ಮ ಕೃತಿಗಳನ್ನು ರಚಿಸಿದರು.ಹೆಳವನಕಟ್ಟೆ ಗಿರಿಯಮ್ಮ (1750) ಅವರದು ಹರಿದಾಸ ಸಾಹಿತ್ಯದಲ್ಲಿ ಸ್ತ್ರೀಪರ ನೆಲೆಯ ಚಿಂತನೆಯಲ್ಲಿ ಗಮನಾರ್ಹ ಹೆಸರು. ಚಂದ್ರಹಾಸನ ಕಥೆ, ಸೀತಾಕಲ್ಯಾಣ, ಬ್ರಹ್ಮಕೊರವಂಜಿ ಮೊದಲಾದ ಕೃತಿಗಳನ್ನು ಅನೇಕ ಕೀರ್ತನೆಗಳನ್ನು ರಚನೆ ಮಾಡಿದರು. ಜಗನ್ನಾಥದಾಸರು (1782) ಸಾಹಿತ್ಯಿಕ ಕಾರ್ಯವನ್ನು ವಿಸ್ತಾರಗೊಳಿಸಿದರು. ಎಲ್ಲ ಹರಿದಾಸರಂತೆ ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸುವುದರೊಂದಿಗೆ ‘ಹರಿಕಥಾಮೃತಸಾರ’ ಎಂಬ ಹರಿದಾಸ ಭಕ್ತಿ ತತ್ತ್ವ ಪ್ರಚೋದಕ ಮಹಾಪದ್ಯ ಪ್ರಬಂಧವನ್ನು, ‘ತತ್ತ್ವಸುವಾಲಿ’ ಎಂಬ ಲಘು ಪ್ರಬಂಧವನ್ನು ನಿರ್ಮಿಸಿದರು. ಸಂಸ್ಕøತ ಅರಿಯದ ಜನರಿಗೆ ದ್ವೈತ ಮತ ತತ್ವಗಳನ್ನು ಮಾನವನ ನಡವಳಿಕೆಗಳನ್ನು ಇತರ ಅನೇಕ ನೀತಿ ವಿಷಯಗಳನ್ನು ತಿಳಿಯಲು ಪರಮ ಪ್ರಯೋಜನವಾಗುವ ಹಿರಿಯ ಗ್ರಂಥ ‘ಹರಿಕಥಾಮೃತಸಾರ’ವಾಗಿದೆ.ಜಗನ್ನಾಥದಾಸರ ‘ಸುವಾಲಿ’ಗಳು ಸುಂದರವಾದ, ತ್ರಿಕಾಲ ಸತ್ಯವನ್ನು ಹೇಳುವ ಸಿದ್ಧಾಂತ ವಚನಗಳ ಸಮೂಹವಾಗಿವೆ. ಇದರ bsÀಂದಸ್ಸಿನ ರೀತಿಯು ತ್ರಿಪದಿಯ ಪ್ರಕಾರಕ್ಕೆ ಸೇರಿದೆ. ಇಲ್ಲಿ ಪಾಂಡಿತ್ಯದ ವೈಖರಿ ಇಲ್ಲ. ನೇರವಾಗಿ ಹೃದಯದಿಂದ ಹರಿದು ಬಂದ ಅನುಭವದ ಸಂಪತ್ತಿನ ಸಾರ ಸವಿಯೇ ಈ ಸುವಾಲಿಗಳು
ನಿಂದಿಸುವವರೆಲ್ಲ ನಿಂದ್ಯರಾಗುವರು, ಅಬಿs
ವಂದಿಸುವ ಜನರು ಜಗದೊಳು | ಜಗದೊಳು ಜನರಿಂದ
ವಂದ್ಯರಾಗುವರು ಎಂದೆಂದು ||
ನಿಂದಕರು ಮತ್ತು ಸಜ್ಜನರು ಸಮಾಜದಲ್ಲಿ ಉಳಿಸಿಕೊಳ್ಳುವ ಮೌಲ್ಯವನ್ನು ಜಗನ್ನಾಥದಾಸರು ತಮ್ಮ ಸುವಾಲಿಗಳ ಮೂಲಕ ಸಾರಿದರು. ಜಗನ್ನಾಥದಾಸರ ನಂತರ ಈ ಪರಂಪರೆಯಲ್ಲಿ ಗುರುತಿಸಿಕೊಂಡವರು ಕರ್ಜಗಿ ದಾಸಪ್ಪನವರು, ಲಿಂಗಸೂಗೂರಿನ ಯೋಗೀಂದ್ರ ದಾಸರು, ಹುಂಡೇಕಾರ ದಾಸರು, ಅಬಿsನವ ಜನಾರ್ದನ ವಿಠ್ಠಲ, ಬಿsೀಮೇಶ ವಿಠ್ಠಲ , ಲಿಂಗಸೂರು ವೆಂಕಟದಾಸರು, ರಾಮದಾಸರು, ಗುರುಪ್ರಾಣೇಶ ವಿಠ್ಠಲ, ಶ್ರೀಶ ಪ್ರಾಣೇಶ ವಿಠ್ಠಲ, ಸುಖನಿದಿs ವಿಠ್ಠಲ, ಕಂಪ್ಲಿ ನರಸಿಂಹದಾಸರು, ಕುಂಟೋಜಿದಾಸರು... ಹೀಗೆ ಪಟ್ಟಿ ಬೆಳೆಯುತ್ತದೆ.
. ಒಟ್ಟಾರೆ ಕನ್ನಡ ಜಾನಪದ ಪರಂಪರೆಯನ್ನು ಬಳಿಸಿಕೊಂಡು ಬಂದ ದಾಸ ಸಾಹಿತ್ಯ ಪರಂಪರೆಯು ಜನಮುಖಿಯಾದ ರಚನೆಗಳನ್ನು ಕೊಡುತ್ತ ಕನ್ನಡ ನವೋದಯಕ್ಕೆ ಭೂಮಿಕೆ ಸಜ್ಜುಗೊಳಿಸಿರುವ ಪ್ರಕ್ರಿಯೆಗೆ ಚಾಲನೆ ನೀಡಿತು.
====================================================================  
                                                             -ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ
ವಿಳಾಸ : ಡಾ.ಪ್ರಕಾಶ ಗ.ಖಾಡೆ, ಶ್ರೀ ಗುರು, ಸರಸ್ವತಿ ಬಡಾವಣೆ,ಸಂಖ್ಯೆ-63,ನವನಗರ,ಬಾಗಲಕೋಟ.ಮೊ.-9845500890

Wednesday 17 April 2013

ನಗರಾಂಚಲ ಜಾನಪದ ಮತ್ತು ‘ರತ್ನನ ಪದಗಳು’


                ನಗರಾಂಚಲ ಜಾನಪದ ಮತ್ತು ‘ರತ್ನನ ಪದಗಳು’
 
                                                   -ಡಾ.ಪ್ರಕಾಶ ಗ.ಖಾಡೆ
  ಜನಪದ ಕಾವ್ಯದ ಪ್ರಭಾವದಿಂದ ಜೀವಂತವಾದ ಹೊಸಕಾವ್ಯ ಹುಟ್ಟಿ ಬರುವ ಸಂದರ್ಭದಲ್ಲಿ ಬೇಂದ್ರೆ, ಮಧುರಚೆನ್ನ, ಆನಂದಕಂದರಂತೆ ಮೈಸೂರು ಕೇಂದ್ರದ ಜಿ.ಪಿ. ರಾಜರತ್ನಂ ಅವರನ್ನು ಪ್ರಧಾನವಾಗಿ ಗುರುತಿಸಬೇಕು. 1932 ರಲ್ಲಿ ‘ಯೆಂಡ್ಕುಡ್ಕ ರತ್ನ’ ಎಂಬ ಹೆಸರಿನಲ್ಲಿ ಹದಿನಾಲ್ಕು ಪದ್ಯಗಳನ್ನು ಪ್ರಕಟಿಸಿದ ಅವರು ಇದೇ ಭಾವಲಹರಿಯಲ್ಲಿ ಬರೆದ ಪದ್ಯಗಳನ್ನು ಸೇರಿಸಿ 1934 ರಲ್ಲಿ ‘ರತ್ನನ ಪದಗಳು’ ಪ್ರಕಟಿಸಿದರು. ಅನನ್ಯವಾದ ತನ್ನ ಪ್ರದೇಶದ ಜನರಾಡುವ ಮಾತನ್ನು ಕಾವ್ಯಕ್ಕೆ ತಂದ ರಾಜರತ್ನಂ ಅವರು ಒಂದು ವಿಶಿಷ್ಟ ಪ್ರಯೋಗವನ್ನು ಕನ್ನಡಕ್ಕೆ ಪರಿಚಯಿಸಿದರು. ಸಂಪೂರ್ಣ ಗ್ರಾಮ್ಯವನ್ನೇ ಬಳಸಿಕೊಂಡು ಬರೆದ ‘ರತ್ನನ ಪದಗಳು’ ಶುದ್ಧವೆನ್ನಬಹುದಾದ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಇವುಗಳನ್ನು ಕೂಡಿಸುವ ಒಂದು ರಸ ಸೇತುವೆಯಾಯಿತು.
ಯೆಂಡ ಯೆಡ್ತಿ ಕನ್ನಡ ಪದ್ಗೊಳ್
ಅಂದ್ರೆ ರತ್ನಂಗ್ ಪ್ರಾಣ
ಬುಂಡೇನೆತ್ತಿ ಕುಡುದ್ಬುಟ್ಟಾಂದ್ರೆ
ತಕ್ಕೋ ಪದ್ಗೋಳ್ ಬಾಣ
ಕುಡುಕನ ಭಾಷೆಯ ಅನುಕರಣದಲ್ಲಿ ಕಾವ್ಯದ ಮಾಂತ್ರಿಕತೆಯನ್ನು ಸೃಜಿಸಿದ ಕವಿ ಗ್ರಾಮ್ಯ ಭಾಷೆಯಲ್ಲಿ ಇಷ್ಟು ಅಚ್ಚುಕಟ್ಟಾಗಿ ಕವಿತೆಗಳನ್ನು ಬರೆಯಲು ಸಾಧ್ಯವೆಂಬುದನ್ನು ತೋರಿಸಿ ಅಚ್ಚರಿ ಹುಟ್ಟಿಸಿದರು. ರಾಜರತ್ನಂ ಅವರದು  ಅದ್ಭುತವಾದ ಕವನ ಶಕ್ತಿ. ಪ್ರಾಸವನ್ನು ಜೋಡಿಸುತ್ತ bsÀಂದೋಬದ್ಧವಾಗಿಯೇ ಕಾವ್ಯವನ್ನು ರೂಪಿಸುತ್ತಾರೆ.
     ಜನರಾಡುವ ಪದ ಬಳಕೆಯ ಸಾಲುಗಳು ಇಲ್ಲಿ ಕಂಡರೂ ಒಂದು ವಿಶಿಷ್ಟವಾದ ಶಿಷ್ಟ ಇಲ್ಲಿ ಕೆಲಸ ಮಾಡುತ್ತದೆ. ಅಂದರೆ ಕವಿಯ ಸುಶಿಕ್ಷಿತ ಶಿಷ್ಟ ಪ್ರಜ್ಞೆ ತನಗೆ ಬಿsನ್ನವಾದ ಜನಪದ ಭಾಷೆಯ ಮೂಲಕ ಅಬಿsವ್ಯಕ್ತಗೊಳ್ಳುವ ಪ್ರಯತ್ನದಲ್ಲಿ ಆ ಭಾಷೆಯ ಸಾಧ್ಯತೆಗಳ ಜೊತೆ ಸೆಣಸಾಡಿತಾದರೂ ತನ್ನ ಶಿಷ್ಟ ಪ್ರಜ್ಞೆ ಯನ್ನು ಪ್ರಾಪ್ತಗೊಳಿಸಿಕೊಟ್ಟ ಶಿಷ್ಟ ಭಾಷೆಯನ್ನೂ ಅದರೊಟ್ಟಿಗೇ ಒಂದು ವಿಶಿಷ್ಟ ಹದ ಮತ್ತು ಅನನ್ಯತೆಯಲ್ಲಿ ಬೆಸೆಯಲು ಪ್ರಯತ್ನಿಸಲಿಲ್ಲ. ಇದರಿಂದಾಗಿ ಜನಪದ ಅಥವಾ ಗ್ರಾಮ್ಯ ಭಾಷೆಯನ್ನು ಅದರ ವೈವಿಧ್ಯ ರಮ್ಯತೆಗಾಗಿಯೋ ಅನೇಕ ಕಡೆಗಳಲ್ಲಿ ಪ್ರಯೋಗಿಸಿದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ರಾಜರತ್ನಂ ಅವರು ಗ್ರಾಮ್ಯ ಭಾಷೆಯಲ್ಲಿ ಇಲ್ಲಿ ಕವಿತೆಗಳನ್ನು ರಚಿಸಿದರೂ ಕೊನೆಯಲ್ಲಿ ‘ರತ್ನನ ಪದಕ್ಕೆ ಕನ್ನಡಿ’ ಎಂಬ ಅನುಬಂಧದಲ್ಲಿ ಪ್ರತಿಯೊಂದು ಕವನದ ವಾಕ್ಯವನ್ನು ಬಿಡಿಸಿ ಬರೆದು ಅರ್ಥ ವಿಸ್ತರಿಸಿದ್ದನ್ನು ಗಮನಿಸಬೇಕು. ಇದನ್ನು ಕುರ್ತಕೋಟಿಯವರು ‘ಭಾಷಾಂತರ ವ್ಯಾಪಾರ’ವೆನ್ನುತ್ತಾರೆ. “ಇಲ್ಲಿ ಉಪಯೋಗಿಸುವ ಪ್ರತಿಯೊಂದು ಶಬ್ದಕ್ಕೂ ಸಂವಾದಿಯಾಗಿ ಒಂದು ಶಿಷ್ಟ ಪದವಿದೆ. ಅದೇ ರೀತಿಯಲ್ಲಿ ಶಿಷ್ಟವಾದ ಭಾಷೆ ಗ್ರಾಮ್ಯ ರೀತಿಯಲ್ಲಿ ಅನುವಾದಗೊಳ್ಳುತ್ತದೆ. ಹೀಗೆ ಹೊಸ ಪ್ರಪಂಚದ ನಾಮರೂಪಗಳು ಬದಲಾದರೂ ಅವುಗಳ ವಾಸ್ತವತೆ ಬದಲಾಗುವುದಿಲ್ಲ. ಇಲ್ಲಿ ಭಾಷೆ ತನಗೆ ಸಹಜವಾದ ಆವರಣದ ಮತ್ತು ಮನಸ್ಸಿನ ಹಲವು ಅವಸ್ಥೆಗಳನ್ನು ಸಮರ್ಪಕವಾಗಿ ಭರಿಸಿದೆ. ಬೆಂಗಳೂರಿನ ಶಿಷ್ಟ ಭಾಷೆಗೆ ಹಾಗೂ ‘ರತ್ನನ ಪದಗಳ’ ನಗರಾಂತರ್ಗತ ಅಥವಾ ಜಿ.ಎಸ್.ಎಸ್. ಅವರು ಕರೆದಂತೆ ‘ನಗರಾಂಚಲ ಜನಪದ’ ಭಾಷೆಗೆ ಪರಸ್ಪರ ಇರುವಷ್ಟು ಅಂತರ ಧಾರವಾಡದ ಶಿಷ್ಟ ಹಾಗೂ ಜನಪದ ಭಾಷೆಗೆ ಇಲ್ಲ. ಹಾಗಾಗಿ ಕನ್ನಡ ನುಡಿಯ ಅಬಿsಮಾನ. ಬದುಕಿನ ಬಗೆಗೆ ರತ್ನ ಮಾಡುವ ತತ್ವ ಮೀಮಾಂಸೆಗಳು ಬಳಕೆಯಾದ ಭಾಷೆ ಹಾಗೂ ಆವರಣದ ಸಂವೇದನಾ ಕ್ಷೇತ್ರಕ್ಕೆ ಹೊರಗಿನಿಂದ ಆಮದಾದವುಗಳಂತೆ ಅನ್ನಿಸುತ್ತದೆ.  –ಡಾ.ಪ್ರಕಾಶ ಗ.ಖಾಡೆ
===============================  *
        ವಿಳಾಸ ;ಡಾ.ಪ್ರಕಾಶ ಗ.ಖಾಡೆ ,ಶ್ರೀ ಗುರು ,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ.
             ಮೊ.-9845500890 

ಗ್ರಾಮೀಣ ಸಮುದಾಯ ಮತ್ತು ಜನಪರ ಸಾಂಗತ್ಯ


ವಿಶೇಷ ಲೇಖನ :

     ಗ್ರಾಮೀಣ ಸಮುದಾಯ ಮತ್ತು  ಜನಪರ ಸಾಂಗತ್ಯ    

                

                                          - ಡಾ.ಪ್ರಕಾಶ ಗ. ಖಾಡೆ, ಬಾಗಲಕೋಟ
                 
            ಭಾರತೀಯ ಸಂವೇದನೆಯಲ್ಲಿ ಇಂಗ್ಲಿಷ್ ಶಿಕ್ಷಣ ಕ್ರಮ ಮತ್ತು ವಸಾಹತುಶಾಹಿ ಕಾರಣವಾಗಿ ಉಂಟಾದ ಸಂಘರ್ಷ ನೆಲೆ ಕನ್ನಡ ಭಾಷಿಕ, ಸಾಂಸ್ಕøತಿಕ ಪರಿಸರದ ಮೇಲೂ ದಟ್ಟ ಪ್ರಭಾವ ಮೂಡಿಸಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾದ ಸಾಂಸ್ಕøತಿಕ ಪುನರುಜ್ಜೀವನವು ಒಂದು ಬಗೆಯಲ್ಲಿ ವಸಾಹತುಶಾಹಿಯ ಕೊಡುಗೆ ಎನಿಸಿದರೂ ಅದರ ವಿರುದ್ಧ ದೇಸಿಯ ಒಳ ಬಂಡಾಯ ತೀವ್ರವಾಗಿ  ನಡೆದುಕೊಂಡೆ ಬಂದಿತ್ತು. ದೇಸಿವಾದದ ಹಿಂದೆ ಸಂಸ್ಕøತಿ ಬಗೆಗಿನ ಚಲನಶೀಲವಾದ ಪರಿಕಲ್ಪನೆಯಿದೆ. ಬದುಕಿನ ಸತ್ವಶೀಲಗಳನ್ನು ಕಬಳಿಸುವ ಒಳಗಣ ಮತ್ತು ಹೊರಗಣ ಎಲ್ಲ ಚಲನೆಗಳ ವಿರುದ್ಧ ದೇಸಿವಾದವು ಬಂಡು ಹೂಡುತ್ತದೆ, ಹೀಗಾಗಿ ಇಲ್ಲಿ ವಸಾಹತುಶಾಹಿಯ ಭದ್ರ ಬಾಹುಗಳು ಒಟ್ಟು ಸ್ಥಳೀಯತೆಯನ್ನು ಚಾಚಿ ತಬ್ಬಿಕೊಳ್ಳಲು ಮಾಡಿದ ಹೇಳಿಕೆಗಳು ಭಾರತೀಯ ಗ್ರಾಮ ಸಮುದಾಯಕ್ಕೆ ಕೆಲವು ಬಾರಿ ತಟ್ಟದೇ ದೂರವೇ ಉಳಿಯುವಂತಾಯಿತು. ಈ ಚರ್ಚೆಗೆ ಪೂರಕವಾಗಿ ವಸಾಹತುಶಾಹಿ ಸಂಘರ್ಷವು ಒಟ್ಟು ಭಾರತೀಯ ಆ ಮೂಲಕ ಕನ್ನಡತನವನ್ನು ಆಕ್ರಮಿಸಿಕೊಂಡಿತೆಂದು ಹೇಳುವುದು ಅರ್ಧಸತ್ಯವಾಗುತ್ತದೆ. ಬ್ರಿಟಿಷ್ ಮಿಶನರಿಗಳು ಭಾರತದ ನಾಗರಿಕತೆಯನ್ನು ನಾಶ ಮಾಡಲು ಪ್ರಯತ್ನಿಸಿದರು. ಆದರೆ ಎರಡು ಕಾರಣಗಳಿಂದಾಗಿ ಅವರು ಇದರಲ್ಲಿ ಸಫಲರಾಗಲು ಸಾಧ್ಯವಾಗಲಿಲ್ಲ. ಒಂದು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳ ಶಿಲ್ಪಿಗಳು ಹಾಗೂ ರಕ್ಷಕರು ಮಹಿಳೆಯರು, ಇನ್ನೊಂದು ಭಾರತದ ಜನಸಂಖ್ಯೆಯ ಪ್ರತಿಶತ ಎಪ್ಪತ್ತೈದರಷ್ಟು ಮಂದಿ ಹಳ್ಳಿಗಳಲ್ಲಿ ವಾಸ ಮಾಡುವವರು. ಹಾಗಾಗಿ ಬ್ರಿಟಿಷ್ ಆಡಳಿತಗಾರರ ಹಾಗೂ ಮಿಶನರಿಗಳ ಪ್ರಭಾವ ಅವರನ್ನು ಮುಟ್ಟಲೇ ಇಲ್ಲ. 
            ಹಾಗಾಗಿ ಈ ವಸಾಹತುಶಾಹಿಯ ಬಾಹುಗಳು ನಮ್ಮ ಗ್ರಾಮ ಜೀವನವನ್ನು ವ್ಯಾಪಕವಾಗಿ ಆಕ್ರಮಿಸಿಕೊಳ್ಳದೆ ಇರುವ ಕಾರಣವು ಇಲ್ಲಿ ಜನಪದರ ಹಾಡು ಸಂದರ್ಭಗಳಿಗೆ ಧಕ್ಕೆ ಬಾರದೇ ಅವು ರೂಡಿsಗತವಾಗುತ್ತ ಉಳಿದುಕೊಂಡು ಬಂದವು. ಎಲ್ಲೆಲ್ಲಿ ಈ ಪ್ರಭಾವವು ದಟ್ಟವಾಯಿತೋ ಅಲ್ಲೆಲ್ಲ ಪ್ರತಿರೋಧವಾಗಿ ವಸಾಹತುಶಾಹಿಯ ಧೋರಣೆಯನ್ನು ಖಂಡಿಸಲಾಯಿತು. ಆದರೆ ವಸಾಹತುಶಾಹಿ ಮನಸ್ಸುಗಳಿಂದ ರೂಪಿತವಾದ ನಮ್ಮ ನಗರ ಸಮುದಾಯವು ಗ್ರಾಮ ಬದುಕಿನ ಒಳ ಆವರಣವನ್ನು ಕಲುಷಿತಗೊಳಿಸುವ ಸಂದರ್ಭಗಳೂ ಬಂದಾಗಲೂ ಇಲ್ಲಿ ತಲ್ಲಣ, ತಳಮಳ ಆರಂಭವಾಯಿತು. ನಗರ ಬದುಕಿನ ಆಕರ್ಷಣೆಗಳು, ಆಧುನಿಕರಣದ ಸೋಂಕಿಲ್ಲದ ಗ್ರಾಮ ಬದುಕನ್ನು ¿sದ್ರಗೊಳಿಸುವ ಸಂಚೂ ಸದ್ದಿಲ್ಲದೆ ನಡೆಯಿತು. 
            ಈ ಬಗೆಯಲ್ಲಿ ಯಾವುದನ್ನು ಭಾರತೀಯವಾಗಿಟ್ಟುಕೊಳ್ಳಬೇಕೆಂಬ ದ್ವಂದ್ವ ಆರಂಭವಾಯಿತು. ಗಾಂದಿs ಹೇಳಿದರು ‘ತನ್ನಷ್ಟೇ ಪುರಾತನವಾದ ಗ್ರಾಮ ಭಾರತ ಅಥವಾ ವಿದೇಶೀ ಪ್ರಭುತ್ವದ ದಾಸ್ಯದಡಿಯಲ್ಲಿ ಸೃಷ್ಟಿಯಾಗಿ ಬೆಳೆದು ಬಂದ ನಗರ ಜೀವನದ ಭಾರತ ಇವೆರಡರಲ್ಲಿ ಒಂದನ್ನು ನಾವು ಆರಿಸಿಕೊಳ್ಳಬೇಕಾಗಿದೆ. ಹಳ್ಳಿಗಳ ಮೇಲೆ ಆಕ್ರಮಣ ಮಾಡಿ ಅಲ್ಲಿನ ಸಂಪತ್ತನ್ನೆಲ್ಲ ಹೀರುತ್ತಿರುವ ಇಂದಿನ ನಗರಗಳು ಹಳ್ಳಿಗಳನ್ನು ಹಾಳುಗೆಡವುತ್ತಿವೆ. ಈ ದಬ್ಬಾಳಿಕೆ ನಿಂತು ನಗರಗಳು ಗ್ರಾಮ ಜೀವನದ ಪೆÇೀಷಕವಾದ ಸೇವೆಸಲ್ಲಿಸುವಂತಿರಬೇಕೆಂದು ನನ್ನ ಖಾದಿ ಮನೋಭಾವ ನನಗೆ ಬೋದಿsಸುತ್ತದೆ. ಹಳ್ಳಿಗಳ ಶೋಷಣೆ ಒಂದು ವ್ಯವಸ್ಥಿತ ಹಿಂಸಾಚಾರ. ನಾವು ಸ್ವರಾಜವನ್ನು ಅಹಿಂಸೆಯ ತಳಹದಿಯ ಮೇಲೆ ನಿರ್ಮಿಸುವುದಾದರೆ ಗ್ರಾಮಗಳಿಗೆ ಯೋಗ್ಯ ಸ್ಥಾನವನ್ನು ಕೊಡಲೇಬೇಕು.’(ಹರಿಜನ ಪತ್ರಿಕೆ-20.01.1940) ಹೀಗೆ ಗ್ರಾಮ ಸಮುದಾಯದ ಮನೋಧರ್ಮ ಮತ್ತು ಮನಸ್ಥಿತಿಗಳು ಕೋಮಲ ಹಾಗೂ ಹೃದಯಪೂರ್ಣವಾದುದ್ದರ ಕಾರಣವಾಗಿ ಅಹಿಂಸೆಯ ಆಚರಣೆಗೆ ಅದೇ ಶಕ್ತಿ ಮತ್ತು ಬಲ ತುಂಬಬಲ್ಲದೆಂದು ಅರಿತಿದ್ದ ಗಾಂದಿsೀಜಿಯವರು ಗ್ರಾಮ ಸಮುದಾಯದ ಆಶಯಗಳಿಗೆ ಮಹತ್ವ ನೀಡಿದ್ದರು. 
     ಗಾಂಧೀಜಿಯವರಿಗೆ ಸ್ಥಳೀಯತೆಯು ಎಲ್ಲಾ ಯೋಚನೆ-ಯೋಜನೆಗಳ ಮೂಲ ಮಂತ್ರವಾಗಿತ್ತು. ಆ ಹೊತ್ತಿಗೆ ವಸಾಹತು ಮನೋಭೂಮಿಕೆ ಉಂಟುಮಾಡಿದ ನಗರ-ಗ್ರಾಮ್ಯಗಳ ತಾಕಲಾಟದ ಒಳ ಸಂಘರ್ಷಣೆಗೆ ಅವರು ಪ್ರತಿಕ್ರಿಯಾತ್ಮವಾಗಿ ಅನೇಕ ಚಿಂತನ, ಭಾಷಣಗಳನ್ನು ಮುಂದಿಡುತ್ತಾ ಬಂದರು. ಗಾಂದಿsಯವರ ಈ ಚಿಂತನೆಗಳನ್ನು ಅಕ್ಷರ ಬಾರದ, ಸಂಪರ್ಕ ರಹಿತ ಗ್ರಾಮ ಸಮುದಾಯಕ್ಕೆ ತಲುಪಿಸುವಲ್ಲಿ ನಮ್ಮ ಜನಪದ ಮೌಖಿಕ ಕಾವ್ಯ ತುದಿಗಾಲ ಮೇಲೆ ನಿಂತು ಕೆಲಸ ಮಾಡಿ ಪ್ರಧಾನ ಬಿsತ್ತಿಗೆ ತನ್ನನ್ನು ಸಮರ್ಪಿಸಿಕೊಂಡಿತು. ಈ ಕಾರ್ಯ ವ್ಯಾಪಕವಾಗಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಹಬ್ಬಿತು. ಲಾವಣಿಕಾರರು ತಮ್ಮ ಹಾಡುಗಳಿಗೆ ಸಾಂದಬಿರ್sಕತೆಯನ್ನು ಬಳಸಿಕೊಂಡು ರಾಷ್ಟ್ರೀಯ ಚಳವಳಿಗೆ ಗ್ರಾಮ ಸಮುದಾಯವನ್ನು ಸಜ್ಜುಗೊಳಿಸಿದರು.
     ಗಾಂದಿsೀಜಿಯವರ ಸಂದೇಶ ಮತ್ತು ಆಶಯಗಳಿಗೆ ದತ್ತವಾದ ರಾಷ್ಟ್ರೀಯ ಆಂದೋಲನ ಪ್ರಚಾರಕ್ಕಾಗಿ ಗೀತ-ಮೇಳಗಳನ್ನು ಕಟ್ಟಿ ತಮ್ಮ ಹಾಡುಗಳ ಮೂಲಕ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಕೀರ್ತಿ ಲಾವಣಿಕಾರರಿಗೆ ಸಲ್ಲುತ್ತದೆ. ದೇಸೀಯ ಚಿಂತನೆಗಳಿಗೆ ಗಾಂದಿsೀಜಿ ಒತ್ತು ಕೊಡುವುದರ ಮೂಲಕ ಗ್ರಾಮ ಸಂಸ್ಕøತಿಯನ್ನು ಎತ್ತಿ ಹಿಡಿದರು. ಗ್ರಾಮ ಸಂಸ್ಕøತಿಯ e್ಞÁನ ಕ್ಷೇತ್ರಗಳು ಮೌಖಿಕ ಆಶಯಗಳಾಗಿದ್ದವು. ಉದ್ದಕ್ಕೂ ಮೌಖಿಕ ಮತ್ತು ಲಿಖಿತ ನೆಲೆಗಳ ಬಗೆಗೆ ಸಂಘರ್ಷಗಳು ಕಂಡು ಬಂದವು. ಜಾನಪದವು ಮೌಖಿಕ ಕಾವ್ಯದ ಒಂದು ಸಮೃದ್ಧ ಸೃಷ್ಟಿ. ಆದರೆ ಲಿಖಿತವಾಗಿ ಅದು ಒಂದು ಕಟ್ಟಳೆಗೆ ಒಳಗಾದಾಗ ಅದರ ಹೊಸತನವೆಂಬುದು ಎಷ್ಟು ಪ್ರಸ್ತುತ ಎಂಬ ಕುರಿತು ಜಿe್ಞÁಸೆಗಳು ಆರಂಭವಾದವು. ಲಿಖಿತವೆನ್ನುವುದು ಜಾನಪದವನ್ನು ಒಂದು ಬಗೆಯಲ್ಲಿ ಕಟ್ಟಳೆಗೆ ಒಳಪಡಿಸುತ್ತದೆ. ಜನಪದ ಕಾವ್ಯಗಳು ಉದ್ದಕ್ಕೂ ಮೌಖಿಕ ಸಂವಹನದಿಂದಲೇ ಉಳಿದುಕೊಂಡು ಬಂದು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಕಾಲಕಾಲಕ್ಕೆ ತನ್ನ ಹೊಸತನದ ಇರುವನ್ನೇ ಪ್ರಕಟಪಡಿಸುತ್ತ ಬಂದವು. ಹೀಗೆ ಮೌಖಿಕ ಕಾವ್ಯ ಸಂವಹನದಿಂದ ಪ್ರಭಾವಿತರಾಗಿ ಲಿಖಿತವೆನ್ನುವುದು ಬಂದಾಗ ನಮ್ಮವರು ಬರೆದದ್ದು ಅವರ ಸೃಜನಶೀಲತೆಯೊಂದಿಗೆ ಜನಪದ ಮೌಖಿಕ ಸಂವಹನದ ಎಳೆಗಳೂ ಸೇರಿ ‘ಜಾನಪದವೇ’ ಎನ್ನುವಷ್ಟು ಗಾಢತೆ ಮೆರೆದವು.ಕಿ.ರಂ.ನಾಗರಾಜ ಅವರ ಪ್ರಕಾರ ‘ಬಹುತೇಕ ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳು ಅನಕ್ಷರಸ್ಥ ಸಂಸ್ಕøತಿಯ ಬಗೆಗೆ ಗಾಢವಾದ ತಿಳುವಳಿಕೆಯಿಂದ ಕೂಡಿದ್ದಾಗಿದೆ. ಇಂದಿಗೂ ನಿಜವಾದ ಅರ್ಥದಲ್ಲಿ ಅನಕ್ಷರಸ್ಥರೇ ಕನ್ನಡ ಕವಿತೆಯ ನಿಜವಾದ ಗ್ರಾಹಕರು.’
       ಮೌಖಿಕ ಕಾವ್ಯ ಸಂವಹನವು ಹೆಚ್ಚು ಕೇಳುಗರನ್ನು ಪಡೆದುಕೊಳ್ಳುತ್ತದೆ ಮತ್ತು ಅರ್ಥವಾಗಲು ಯಾರ ನೆರವನ್ನೂ ಬಯಸುವುದಿಲ್ಲ. ಕೆಲವು ಕಟ್ಟಳೆಗಳು ತನ್ನಷ್ಟಕ್ಕೆ ತಾವೇ ರೂಪುಗೊಳ್ಳುತ್ತವೆ. ಹೀಗಾಗಿ ಈ ಕಟ್ಟಳೆಗಳಿಂದ ಜಾನಪದವು ಅಳಿದು ಹೋಗುತ್ತದೆ ಎಂಬ ಆತಂಕವಿದೆ. ಇದಕ್ಕೆ ಮೊಗಳ್ಳಿ ಗಣೇಶ್ ಹೀಗೆ ಹೇಳುತ್ತಾರೆ: “ಜಾನಪದ ಪಠ್ಯ ಹಾಳಾಗಿ ಹೋಗುತ್ತದೆ ಎಂಬ ಆತಂಕ ಬೇಕಾಗಿರುವುದಿಲ್ಲ. ಜಾನಪದ ಸ್ವಭಾವವೇ ಅತ್ಯಂತ ಚಲನಶೀಲತೆಯನ್ನು ಬಯಸುವಂಥದ್ದು, ಆದರೆ ಇಲ್ಲಿ ಪಠ್ಯದ ರೂಪ ರಚನೆಯಲ್ಲಿ ಮಹತ್ವದ ಬದಲಾವಣೆಗಳು ದಿsಡೀರನೆ ಉಂಟಾಗದಿದ್ದರೂ ತನ್ನ ರಚನೆಗೆ ಶೈಲಿಗೆ ಹೊಸತನ್ನ ಸ್ವೀಕರಿಸುವ ಗುಣ ಪಠ್ಯಕ್ಕೆ ಇರುತ್ತದೆ. ಅಂದರೆ ಕಾಲದ ಮೌಲ್ಯಗಳು ಸೂಕ್ಷ್ಮವಾಗಿ ಪಠ್ಯದ ಭಾಗಗಳಾಗಿ ಬಿಡುತ್ತವೆ.” ಮೌಖಿಕ ಲಿಖಿತ ಎನ್ನುವಲ್ಲಿ ಕಾವ್ಯ ಸಂವಹನಗೊಳ್ಳುವ ತೀವ್ರತೆಯಲ್ಲಿ ಅದರ ಅರ್ಥವಂತಿಕೆ ಬಿಚ್ಚಿಕೊಳ್ಳುತ್ತದೆ. 
ಅಝಾದ್ ಹಿಂದ್ ಗೀಗೀ ಮೇಳ         
   ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿsಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು. ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜಾನೇವಾರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂದಿsೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ (ಹುಲಕುಂದ ಬಿsೀಮಕವಿ) ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು. 
        
           ಭಾರತೀಯ ಗ್ರಾಮೀಣ ಮನಸ್ಸುಗಳನ್ನು ಆಧುನಿಕತೆ ಆಕ್ರಮಿಸಿಕೊಂಡುದರ ಸಂಕೇತವಾಗಿ ಬದಲಾದ, ಬದಲಾಗುತ್ತಿರುವ ವಸ್ತು ಸಂಗತಿಗಳನ್ನು ಕಾವ್ಯದಲ್ಲಿ ಕಟ್ಟಿಕೊಡುವುದರ ಮೂಲಕ ಲಾವಣಿಕಾರರು ಸಮಕಾಲೀನತೆಗೆ ಸ್ಪಂದಿಸಿದ್ದು ಸ್ಪಷ್ಟವಾಗುತ್ತದೆ. ನಾಡಿನ ಪ್ರೀತಿಯನ್ನು ಅವರ ಕಾವ್ಯಶಕ್ತಿ ಜನಸಾಮಾನ್ಯರಲ್ಲಿ ಮಿಂಚು ಮೂಡಿಸಿತು. ಅಕ್ಷರಬಾರದ ಅನೇಕ ಜನಪದ ಸಮುದಾಯದ ಹಾಡುಗಾರಿಕೆಯಿಂದಾಗಿ ಅಂದು ಗಾಂಧೀಜಿಯವರ ಸಂದೇಶವನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಿದ ಕೀರ್ತಿ ನಮ್ಮ ಜನಪದರಿಗೆ ಸಲ್ಲುತ್ತದೆ.ಈ ಮೂಲಕ ಗಾಂಧೀಜಿ ಸ್ಥಳೀಯತೆಯ ಸದ್ಭಳಕೆಗೆ ಚಾಲನೆ ನೀಡಿದರು.
============***********===========================

            ವಿಳಾಸ : ಡಾ.ಪ್ರಕಾಶ ಗ.ಖಾಡೆ,’ಶ್ರೀ ಗುರು’,ಸರಸ್ವತಿ ಬಡಾವಣೆ,ಸಂಖ್ಯೆ 63,
                  ನವನಗರ,ಬಾಗಲಕೋಟ.ಮೊ.9845500890

Wednesday 10 April 2013


                               ಚೈತ್ರಕ್ಕೆ ನಾಲ್ಕು ಹೊಸ ಎಲೆ



 1
ಚೈತ್ರದ ಮಧ್ಯಾಹ್ನದ ಸೂರ್ಯ
ಅದೆಷ್ಟು ಕಠೋರ,ನೆತ್ತಿ ಸುಡುತ್ತಾನೆ,
ಇವನ ಶಪಿಸೋ ಹೊತ್ತಿಗೆ
ನೋಡಬೇಕು ಸಂಜೆಗೆ ಪಡುವಲದಲ್ಲಿ
ಕೆಂಪು ಕೆಂಪು ದುಂಡನೆಯ ಸೇಬು
ತಂಪು ತಂಪು ಕಣ್ಣಿಗೆ ಎಂಥ ಸೊಗಸು.
 2
ಬೋಳು ಮರದಲ್ಲಿ
 ನೋಡು ನೋಡುತ್ತಿದ್ದಂತೆ
ಚಿಗುರುವ ಎಲೆಗಳು
ಅರಳುವ ಮೊಗ್ಗು ಮೊಗ್ಗುಗಳು
ಮೈದುಂಬಿಕೊಳ್ಳುವ ಪರಿಗೆ ಅನಿಸುತ್ತಿದೆ,
ಪ್ರಕೃತಿ ಮಾತೆಯೋ,ಮದುವಣಗಿತ್ತಿಯೋ ?
  3
ಮಾವಿನ ಮರದ
ಚಿಗುರು ಮೆದ್ದ ಕೋಗಿಲೆಯ
ಚೈತ್ರ ಗಾನ ಈ ವಸಂತಕ್ಕೆ
ತಂದ ಗಾನಲೋಕ
ಧ್ಯಾನಿಸಿಕೊಳ್ಳಬೇಕು ಮನಸ್ಸಿನಲ್ಲಿ
ಎಲ್ಲ ಬಿದ್ದಿವೆ ಇಲ್ಲಿಯೇ ಕಾಣದ ನಾಕ.
4
ಚೈತ್ರಕ್ಕೆ
ಬಂದ ವಸಂತ
ಪ್ರಕೃತಿ ಲೋಕದ
ನಳನಳಿಸುವ ಕಾಂತ.

-ಡಾ.ಪ್ರಕಾಶ ಗ.ಖಾಡೆ

Monday 8 April 2013

ಕನ್ನಡ ಸಾಹಿತ್ಯ ಪಂಡಿತ ಮಂಡಳಿಯ ಸ್ವದೇಶಿ ನಿರ್ಲಕ್ಷ್ಯ-ಡಾ.ಪ್ರಕಾಶ ಗ.ಖಾಡೆ-ಹೊಸದಿಗಂತ-8.4.2013


                                                              ಹೊಸ ದಿಗಂತ-8.4.2013-ಲೇಖನ :
                                ಕನ್ನಡ ಸಾಹಿತ್ಯ : ಪಂಡಿತ ಮಂಡಳಿಯ ಸ್ವದೇಶಿ ನಿರ್ಲಕ್ಷ್ಯ-ಡಾ.ಪ್ರಕಾಶ ಗ.ಖಾಡೆ

Friday 5 April 2013

ಕನ್ನಡ ಜಾನಪದ karnataka folklore: ಅಂತರಾಷ್ಟ್ರೀಯ ಪ್ರಜ್ಞೆ ಮತ್ತು ದೇಸೀಯತೆ.

ಕನ್ನಡ ಜಾನಪದ karnataka folklore: ಅಂತರಾಷ್ಟ್ರೀಯ ಪ್ರಜ್ಞೆ ಮತ್ತು ದೇಸೀಯತೆ.:   -ಡಾ.ಪ್ರಕಾಶ ಗ.ಖಾಡೆ   ನಮ್ಮಲ್ಲಿ ಸ್ಥಳೀಯತೆ ಎಂಬುದು ನಗಣ್ಯ ಆದ ಸಂದರ್ಭದಲ್ಲಿ ಇಲ್ಲಿ ದೇಸೀ ಜೀವನಮುಖಿಯಾದ ಮೌಖಿಕ ಕಾವ್ಯ ಪ್ರಕ್ರಿಯೆಯು ತನ್ನ ಅಸ್ತಿತ್ವದ ನೆಲೆಗ...

Monday 1 April 2013


ಹನಿಗವಿತೆಗಳು

ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ

***
ಈ ಪ್ರೀತಿ
ಜಗದ ರೀತಿ
ಎಲ್ಲಕ್ಕೂ ಒಂದು ನೀತಿ
ಆದರೂ ಸದಾ
ಜೊತೆಯಲ್ಲೇ
ಇರುತ್ತದೆ ಒಂದು ಭೀತಿ


***

ನಮಗೆ ಮಾತ್ರ
ಒಂದು ಕಟ್ಟು ಕಟ್ಟಳೆ
ಎಲ್ಲಿದೆ ಹೇಳಿ
ಹಾರುವ ಹಕ್ಕಿಗೆ
ಬೆಳೆವ ಪೈರಿಗೆ
ಜಗದಗಲದ ವಿಸ್ತಾರದ ಹೆರಿಗೆ


***
ಬರೀ ಮಾತುಗಳು
ಇನ್ನೂ ಜೀವಂತವಾಗಿವೆ
ಶಬ್ದಾಲಂಕಾರಗಳಿಂದ ಅಲ್ಲ
ತುಟಿ ಮೇಲೆ ನಿಂತ
ಒಂದು ಸಣ್ಣ ಪ್ರೀತಿಯಿಂದ

- ಡಾ.ಪ್ರಕಾಶ ಗ. ಖಾಡೆ