ಚೈತ್ರಕ್ಕೆ ನಾಲ್ಕು ಹೊಸ ಎಲೆ
1
ಚೈತ್ರದ ಮಧ್ಯಾಹ್ನದ ಸೂರ್ಯ
ಅದೆಷ್ಟು ಕಠೋರ,ನೆತ್ತಿ ಸುಡುತ್ತಾನೆ,
ಇವನ ಶಪಿಸೋ ಹೊತ್ತಿಗೆ
ನೋಡಬೇಕು ಸಂಜೆಗೆ ಪಡುವಲದಲ್ಲಿ
ಕೆಂಪು ಕೆಂಪು ದುಂಡನೆಯ ಸೇಬು
ತಂಪು ತಂಪು ಕಣ್ಣಿಗೆ ಎಂಥ ಸೊಗಸು.
2
ಬೋಳು ಮರದಲ್ಲಿ
ನೋಡು ನೋಡುತ್ತಿದ್ದಂತೆ
ಚಿಗುರುವ ಎಲೆಗಳು
ಅರಳುವ ಮೊಗ್ಗು ಮೊಗ್ಗುಗಳು
ಮೈದುಂಬಿಕೊಳ್ಳುವ ಪರಿಗೆ ಅನಿಸುತ್ತಿದೆ,
ಪ್ರಕೃತಿ ಮಾತೆಯೋ,ಮದುವಣಗಿತ್ತಿಯೋ ?
3
ಮಾವಿನ ಮರದ
ಚಿಗುರು ಮೆದ್ದ ಕೋಗಿಲೆಯ
ಚೈತ್ರ ಗಾನ ಈ ವಸಂತಕ್ಕೆ
ತಂದ ಗಾನಲೋಕ
ಧ್ಯಾನಿಸಿಕೊಳ್ಳಬೇಕು ಮನಸ್ಸಿನಲ್ಲಿ
ಎಲ್ಲ ಬಿದ್ದಿವೆ ಇಲ್ಲಿಯೇ ಕಾಣದ ನಾಕ.
4
ಚೈತ್ರಕ್ಕೆ
ಬಂದ ವಸಂತ
ಪ್ರಕೃತಿ ಲೋಕದ
ನಳನಳಿಸುವ ಕಾಂತ.
-ಡಾ.ಪ್ರಕಾಶ ಗ.ಖಾಡೆ
No comments:
Post a Comment