ಮಣ್ಣ ಹನಿಗಳು.
ಎಲ್ಲ ಕೊಡುವ
ಮಣ್ಣಲ್ಲೂ:
ಬಗೆ ಬಗೆಯ
ಬಣ್ಣಗಳು.
2.
ಹೊರಟು ನಿಂತಮೇಲೆ
ಉಳಿವ ನೆನಪುಗಳ ಹೂತಿಡಲು:
ಎಷ್ಟು ಅಗೆದರೂ ಮಣ್ಣು
ಅಳಿವ ಭೂರಮೆಯ ಒಡಲು.
3
ಮಣ್ಣ ಸೇರುವ
ಎಲ್ಲವೂ:
ಮಣ್ಣ ಒಡಲ
ಕಾಣ್ಕೆಗಳು.
4.
ಕಲ್ಲು
ಮೂರ್ತಿಗೂ:
ಮಣ್ಣೇ
ಒಡಲು.
ಮೂರ್ತಿಗೂ:
ಮಣ್ಣೇ
ಒಡಲು.
5.
ಮಣ್ಣ ಹೊಟ್ಟೆ
ಸೇರಿದ ತಿಪ್ಪೆ:
ಸಮೃದ್ಧಿಗೆ
ಸಾಕ್ಷಿಯಾಯಿತು.
ಸೇರಿದ ತಿಪ್ಪೆ:
ಸಮೃದ್ಧಿಗೆ
ಸಾಕ್ಷಿಯಾಯಿತು.
6.
ಮಣ್ಣು ಕೊಡಲು
ಹೋದವರು:ಮಣ್ಣು ಒಯ್ಯಬೇಕಿಲ್ಲ.
7.
ನಮಗಷ್ಟೇ
ಅಲ್ಲ ಪರೀಕ್ಷೆ:ಮಣ್ಣಿನ ಗುಣಕ್ಕೂ
ಪರೀಕ್ಷೆ.
8.
ಮಣ್ಣ
ಹಣತೆಗಳಲ್ಲೂ:ಜಗವ ತುಂಬುವ
ಬೆಳಕು.
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
.